ಮಂಜೇಶ್ವರ : ಇತ್ತೀಚೆಗೆ ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ಉನ್ನತ ಪ್ರೌಢ ಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಸಾಧನೆಗೈದಿರುವರು.
ಸಾಕ್ಷಿ ಎ ವಾಟರ್ ಕಲರ್ ಡ್ರಾಯಿಂಗ್ ನಲ್ಲಿ 'ಎ' ಗ್ರೇಡ್ ಮತ್ತು ಪೆನ್ಸಿಲ್ ಡ್ರಾಯಿಂಗ್ ನಲ್ಲಿ 'ಬಿ' ಗ್ರೇಡ್, ಯದ್ವಿ ಕೆ ಶೆಟ್ಟಿ ಜನಪದ ನೃತ್ಯ ಸ್ಪರ್ಧೆಯಲ್ಲಿ 'ಎ' ಗ್ರೇಡ್, ಸಾನ್ವಿ ಶೆಟ್ಟಿ ಲಘು ಸಂಗೀತ ಸ್ಪರ್ಧೆಯಲ್ಲಿ 'ಎ' ಗ್ರೇಡ್, ವೀಕ್ಷಿತ ಅಭಿನಯ ಗೀತೆಯಲ್ಲಿ 'ಎ' ಗ್ರೇಡ್, ಮನ್ವಿತ್ ಕಥೆ ಹೇಳುವ ಸ್ಪರ್ಧೆಯಲ್ಲಿ 'ಎ' ಗ್ರೇಡ್, ತನ್ವಿ ಎಸ್ ಪೂಜಾರಿ ಇಂಗ್ಲಿμï ಕಂಠಪಾಠ ಸ್ಪರ್ಧೆಯಲ್ಲಿ 'ಬಿ' ಗ್ರೇಡ್ ಮತ್ತು ಒಗಟು ಸ್ಪರ್ಧೆಯಲ್ಲಿ 'ಬಿ' ಗ್ರೇಡ್ ಹಾಗೂ ಸ್ವರ ಆರ್ ಸೇನವ ಇಂಗ್ಲಿμï ಅಭಿನಯ ಗೀತೆಯಲ್ಲಿ 'ಬಿ' ಗ್ರೇಡ್ ಪಡೆದಿದ್ದಾರೆ.
ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘ, ಶತಮಾನೋತ್ಸವ ಸಮಿತಿ, ಹಳೆ ವಿದ್ಯಾರ್ಥಿ ಸಂಘ ಹಾಗೂ ಶಾಲಾಭಿವೃದ್ಧಿ ಸಮಿತಿ ಅಭಿನಂದನೆ ಸಲ್ಲಿಸಿದ್ದಾರೆ.