HEALTH TIPS

ಏತಡ್ಕದಲ್ಲಿ ಕಟ್ಟದ ದಿನಾಚರಣೆ ಕಾರ್ಯಕ್ರಮ

              ಬದಿಯಡ್ಕ: ಎಲ್ಲರೂ ಜೊತೆಗೂಡಿ ಕಟ್ಟಗಳನ್ನು ಕಟ್ಟಿದರೆ ಆ ಕಟ್ಟದಿಂದ ಕೃಷಿಕನಿಗೆ ನಷ್ಟವಿಲ್ಲ. ಜಲಸಂಪನ್ಮೂಲವನ್ನು ವೃದ್ಧಿಸುವ ಕಟ್ಟಗಳ ಮೂಲಕ ಜನರು ಒಂದುಗೂಡಿದಾಗ ಸಂಘಟನೆ ಬಲವಾಗುತ್ತದೆ. ಪರಸ್ಪರ ಬಾಂಧವ್ಯದೊಂದಿಗೆ ಸದೃಢವಾದ ಕಟ್ಟವನ್ನೇ ಕಟ್ಟಬೇಕು ಎಂದು ಪ್ರಗತಿಪರ ಕೃಷಿಕ ಗಣಪತಿ ಭಟ್ ಪತ್ತಡ್ಕ ಅಭಿಪ್ರಾಯಪಟ್ಟರು.

             ಏತಡ್ಕ ಕುಂಬ್ಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯದ ಆಶ್ರಯದಲ್ಲಿ ಗ್ರಂಥಾಲಯದ ಅಧ್ಯಕ್ಷ ವೈ. ಕೆ ಗಣಪತಿ ಭಟ್ ಏತಡ್ಕ ಅವರ ಅಧ್ಯಕ್ಷತೆಯೊಂದಿಗೆ ಸಮಾಜಮಂದಿರ ಏತಡ್ಕದಲ್ಲಿ ಮಂಗಳವಾರ ಜರಗಿದ ಕಟ್ಟದ ದಿನಾಚರಣೆ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿ ಅವರು ಮಾತನಾಡಿದರು. 

            ಮುಖ್ಯ ಅತಿಥಿಯಾಗಿ ಕುಂಬ್ಡಾಜೆ ಗ್ರಾಮಪಂಚಾಯತಿ ಸದಸ್ಯ ಕೃಷ್ಣಶರ್ಮ ಜಿ ಮಾತನಾಡಿ ಕಟ್ಟಗಳೇ ನದೀ ತೀರದ ಜನರ ಜೀವನಾಡಿ ಸರಿಯಾಗಿ ಕಟ್ಟಗಳನ್ನು ಕಟ್ಟಿದಾಗ ಬರಗಾಲದಿಂದ ಮುಕ್ತಿ ಹೊಂದಲು ಸಾಧ್ಯ ಎಂದರು. ಬೇರ್ಕಡವು ಕಟ್ಟದ ಮೇಲ್ವಿಚಾರಕ ಉದಯಶಂಕರ ಭಟ್ ಸಿ ಮಾತನಾಡಿ, ನದೀ ತೀರದಲ್ಲಿ ಕಟ್ಟಕಟ್ಟುವ ಜನರಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಒಗ್ಗಟ್ಟು ಇದ್ದಲ್ಲಿ ಮಾತ್ರವೇ ಸಾಂಪ್ರದಾಯಿಕ ಕಟ್ಟಗಳು ಯಶಸ್ವಿಯಾಗಲು ಸಾಧ್ಯ ಎಂದು ನುಡಿದರು. 

              ಡಾ ವೇಣುಗೋಪಾಲ್ ಕಳೆಯತ್ತೋಡಿ ಸ್ವಾಗತಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಏತಡ್ಕ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries