HEALTH TIPS

ಗ್ರಾಮೀಣ ಬುಡಕಟ್ಟು ಜನಜೀವನ: ಕೇಂದ್ರೀಯ ವಿವಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಚಾಲನೆ

 

                   

                ಕಾಸರಗೋಡು: ಕೇರಳದ ಕೇಂದ್ರೀಯ ವಿಶ್ವವಿದ್ಯಾನಿಲಯ ಕಾಸರಗೋಡು ಪೆರಿಯ ಕ್ಯಾಂಪಸ್ ವಿದ್ಯಾರ್ಥಿಗಳು ಹಳ್ಳಿ ಹಾಗೂ ಗುಡ್ಡಗಾಡು ಜನತೆಯ ಜನಜೀವನವನ್ನು ಪ್ರತ್ಯಕ್ಷವಾಗಿ ಅನುಭವಿಸಲು ಅಧ್ಯಯನ ಶಿಬಿರವನ್ನು ಆಯೋಜಿಸಿದರು.   

                     ಕಾಲೇಜಿನ ಸಮಾಜ ಕಾರ್ಯ ವಿಭಾಗದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ವತಿಯಿಂದ ಹತ್ತು ದಿವಸಗಳ ಬುಡಕಟ್ಟು ಅಧ್ಯಯನ ಸಹಬಾಳ್ವೆ ಶಿಬಿರವನ್ನು ಕುತ್ತಿಕೋಲ್ ಪಂಚಾಯಿತಿಯಲ್ಲಿ ಆಯೋಜಿಸಲಾಗಿದೆ. ಪ್ರಭಾರ ಉಪಕುಲಪತಿ ಪೆÇ್ರ.ಕೆ.ಸಿ. ಬೈಜು ಯಾತ್ರೆಗೆ ಚಾಲನೆ ನೀಡಿದರು. ವಿಭಾಗದ ಮುಖ್ಯಸ್ಥರು ಹಾಗೂ ಶಿಬಿರದ ಸಂಯೋಜಕ ಡಾ. ಎಂ. ನಾಗಲಿಂಗಂ, ಶಿಕ್ಷಕರಾದ ಪೆÇ್ರ. ಎ.ಕೆ. ಮೋಹನ್, ರಮಾನಂದ್ ಕೋಡೋತ್, ಡಾ. ರನೀಶ್, ಡಾ. ರಾಜೇಂದ್ರ ಬೈಕಾಡಿ, ವಿದ್ಯಾರ್ಥಿ ಸಂಯೋಜಕರಾದ ಆಲ್ಫ್ರೆಡ್ ವಿನ್ಸೆಂಟ್ ಮತ್ತು ಅರ್ಷ ಪ್ರದೀಪ್  ಉಪಸ್ಥೀತರಿದ್ದರು. ವಿದ್ಯಾರ್ಥಿಗಳು ಕುತ್ತಿಕೋಲ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮೊಕ್ಕಾಂ ಹೂಡಲಿದ್ದಾರೆ. 

                   ಡಿಸೆಂಬರ್ 1ರವರೆಗೆ ಶಿಬಿರ ಆರಂಭಗೊಳ್ಳುವ ಕುರಿತು ಘೋಷಣಾಮೆರವಣಿಗೆ ಆಯೋಜಿಸಿದ್ದರು.  ಗ್ರಾಮಗಳಲ್ಲಿನ ಜನಜೀವನ ಮತ್ತು ಸಾಮಾಜಿಕ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವುದು, ಸರ್ಕಾರ ಮತ್ತು ಇತರ ಸ್ವಯಂಸೇವಾ ಸಂಸ್ಥೆಗಳ ಮಧ್ಯಸ್ಥಿಕೆಗಳು ಮತ್ತು ಚಟುವಟಿಕೆಗಳನ್ನು ತಿಳಿದುಕೊಳ್ಳುವುದು ಶಿಬಿರದ ಮುಖ್ಯ ಉದ್ದೇಶಗಳಾಗಿವೆ. ಜಾಗೃತಿ ತರಗತಿಗಳು, ಕಲೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಸಹ ಆಯೋಜಿಸಲಾಗುವುದು. ಅಧಿಕೃತ ಉದ್ಘಾಟನೆ ಕುಟ್ಟಿಕೋಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಮುರಳಿ ನೆರವೇರಿಸಿದರು.  ವಾರ್ಡ್ ಸದಸ್ಯ ಪಿ. ಮಾಧವನ್, ಕುತ್ತಿಕೋಲ್ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಎ. ಭಾಸ್ಕರನ್,  ಪಿಟಿಎ ಅಧ್ಯಕ್ಷ ಪಿ. ಸುರೇಶ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries