ತಿರುವನಂತಪುರಂ: ಭಾರತದ ಬಾಹ್ಯಾಕಾಶ ಕನಸುಗಳನ್ನು ನನಸು ಮಾಡುವಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (ವಿಎಸ್ ಎಸ್ ಸಿ) ವಹಿಸಿದ ಪಾತ್ರ ದೊಡ್ಡದು ಎಂದು ಕೇಂದ್ರ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಭಾರತದ ಭರವಸೆಗಳು ಮತ್ತು ಕನಸುಗಳನ್ನು ನನಸಾಗಿಸುವಲ್ಲಿ ವಿಎಸ್ ಎಸ್ ಸಿ. ನಿರ್ಣಾಯಕ ಅಂಶವಾಗಿದೆ ಎಂದು ಅವರು ಹೇಳಿದರು.
ಭಾರತದ ಮೊದಲ ರಾಕೆಟ್ ಉಡಾವಣೆಯ 60 ನೇ ವಾರ್ಷಿಕೋತ್ಸವದಲ್ಲಿ ಚಂದ್ರಯಾನ ಮಿಷನ್‍ನ ಯಶಸ್ಸಿನ ಕಾಕತಾಳೀಯತೆಯ ಬಗ್ಗೆ ಕೇಂದ್ರ ಸಚಿವರು ಮಾತನಾಡಿದರು. ತಿರುವನಂತಪುರದಲ್ಲಿ ಇಸ್ರೋ ರಾಕೆಟ್ ಉಡಾವಣೆಯ 60ನೇ ವಾರ್ಷಿಕೋತ್ಸವ ಸಮಾರಂಭವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.
ಬಾಹ್ಯಾಕಾಶ ಕ್ಷೇತ್ರದ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಇತರ ಮುಂದುವರಿದ ಕ್ಷೇತ್ರಗಳಲ್ಲಿ ದೇಶದ ಸಾಧನೆಗಳನ್ನು ಹಂಚಿಕೊಳ್ಳಲು ವಿದೇಶೀ ರಾಷ್ಟ್ರಗಳ ಮುಖ್ಯಸ್ಥರು ಕಾತುರರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದರು.