ಕಾಸರಗೋಡು: ಸರ್ಕಾರ ಜಾರಿಗೊಳಿಸುವ ವಿವಿಧ ಯೋಜನೆಗಳ ಸವಲತ್ತು ಪ್ರತಿ ಕುಟುಂಬದ ವ್ಯಕ್ತಿಗೆ ತಲುಪುವಂತಾಗಬೇಕು ಎಂಬುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ ಎಂಬುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಅವರು ಉದುಮ ವಿಧಾನಸಭಾ ಕ್ಷೇತ್ರದ ನವಕೇರಳ ಸಮಾವೇಶ ಕಾರ್ಯಕ್ರಮವನ್ನು ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿ ಕಾರ್ಯ ರಾಜ್ಯದ ಎಲ್ಲ ವಲಯಕ್ಕೂ ವ್ಯಾಪಿಸಬೇಕು. ಸವಾಲುಗಳ ನಡುವೆಯೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ಯಾವುದೇ ಬಿಕ್ಕಟ್ಟು ಎದುರಾದರೂ, ಇದನ್ನು ಮೀರಿನಿಂತು ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಸಾಗಿಸಲು ಶ್ರಮಿಸಲಾಗುವುದು. ಜನರ ಒಗ್ಗಟ್ಟು, ಏಕತೆ, ಉತ್ಸಾಹವನ್ನು ಎತ್ತಿ ಹಿಡಿಯುವ ಮೂಲಕ ನವ ಕೇರಳದತ್ತ ಹೆಜ್ಜೆ ಇಡಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಲೈಫ್ ಮಿಷನ್ ಯೋಜನೆಗಾಗಿ ಉಚಿತವಾಗಿ ಒಂದು ಎಕರೆ ಜಮೀನು ನೀಡಿದ ವಕೀಲ ಎ.ಗೋಪಾಲನ್ ನಾಯರ್ ಮತ್ತು 60 ಸೆಂಟ್ಸ್ ನೀಡಿದ ಕೊಟ್ಟೋಡಿಯ ಆಲಿಸ್ ಜೋಸ್ ಎಂಬವರನ್ನು ಮುಖ್ಯಮಂತ್ರಿ ಸನ್ಮಾನಿಸಿದರು.
ಶಾಸಕ, ವಕೀಲ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಬಂದರು, ಮ್ಯೂಸಿಯಂ ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹ್ಮದ್ ದೇವರ್ ಕೋವಿಲ್,ರೋಶಿ ಅಗಸ್ಟಿನ್, ಎ.ಕೆ ಶಶೀಂದ್ರನ್, ಕೆ. ಕೃಷ್ಣನ್ ಕುಟ್ಟಿ, ಆಂಟನಿ ರಾಜು, ಕೆ. ರಾಧಾಕೃಷ್ಣನ್, ಕೆ.ಎನ್ ಬಾಲಗೋಪಾಲನ್, ಪಿ.ರಾಜು, ಜೆ. ಚಿಂಚುರಾಣಿ, ವಿ.ಎನ್. ವಾಸವನ್, ಸಜಿ ಚೆರಿಯನ್, ಪಿ.ಎ. ಮಹಮ್ಮದ್ ರಿಯಾಸ್, ಪಿ. ಪ್ರಸಾದ್, ವಿ.ಶಿವನ್ ಕುಟ್ಟಿ, ಎಂ.ಬಿ ರಾಜೇಶ್, ಜಿ.ಆರ್. ಅನಿಲ್, ಆರ್. ಬಿಂದು, ವೀಣಾ ಜಾರ್ಜ್, ವಿ. ಅಬ್ದುಲ್ ರಹಮಾನ್, ಮುಖ್ಯ ಕಾರ್ಯದರ್ಶಿ ಡಾ.ವಿ.ವೇಣು, ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್, ಎ.ಡಿ.ಎಂ ಕೆ.ನವೀನ್ ಬಾಬು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಜಿಲ್ಲಾ ಪಂಚಾಯತ್ ಸದಸ್ಯೆ ಎಸ್.ಎನ್.ಸರಿತಾ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎ.ಪಿ.ಉಷಾ, ಪಿ.ವಿ.ಮಿನಿ, ಎಂ.ಧನ್ಯ, ಪಿ. ಲಕ್ಷ್ಮಿ, ಎಂ.ಕುಮಾರನ್, ಮಾಜಿ ಸಂಸದ ಪಿ. ಕರುಣಾಕರನ್, ಮಾಜಿ ಶಾಸಕರಾದ ಕೆ.ಕುಞÂರಾಮನ್, ಕೆ.ವಿ.ಕುಞÂರಾಮನ್, ಕೆ.ಪಿ.ಸತೀಶ್‍ಚಂದ್ರನ್, ಕಾಸರಗೋಡು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್ ಮಾಸ್ಟರ್ ಉಪಸ್ಥಿತರಿದ್ದರು. ಸಹಕಾರಿ ಜಾಯಿಂಟ್ ರಿಜಿಸ್ಟ್ರಾರ್ ಎಂ.ಲಸಿತಾ ಸ್ವಾಗತಿಸಿದರು. ಸಹಕಾರಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ವಿ.ಚಂದ್ರನ್ ವಂದಿಸಿದರು.