ಕಾಸರಗೋಡು: ಸ್ಕ್ಯಾಫೆÇೀಲ್ಡ್ ಯೋಜನೆಗೆ ಆಯ್ಕೆಯಾದ ಪ್ರಥಮ ವರ್ಷದ ಹೈಯರ್ ಸೆಕೆಂಡರಿ ಶಾಲಾ ಮಕ್ಕಳಿಗಾಗಿ ಸಹವಾಸ ಶಿಬಿರ ಕಾಞಂಗಾಡಿನ ರಾಜ್ ರೆಸಿಡೆನ್ಸಿಯಲ್ಲಿ ಆರಂಭಗೊಂಡಿತು. ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಶೈಕ್ಷಣಿಕವಾಗಿ ಪ್ರತಿಭಾವಂತರದ 40ಮಂದಿ ವಿದ್ಯಾರ್ಥಿಗಳಿಗೆ ವೃತ್ತಿ ಬೆಂಬಲ ಒದಗಿಸುವ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದಾರೆ.
ಕಾಞಂಗಾಡು ನಗರಸಭಾ ಅಧ್ಯಕ್ಷ ಕೆ.ವಿ. ಸುಜಾತಾ ಉದ್ಘಾಟಿಸಿ ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಇಂತಹ ಬೆಂಬಲ ಶ್ಲಾಘನೀಯ ಮತ್ತು ಅವಕಾಶಗಳ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಎಸ್ ಎಸ್ ಕೆ ಜಿಲ್ಲಾ ಯೋಜನಾ ಸಂಯೋಜಕ ವಿ.ಎಸ್.ಬಿಜುರಾಜ್ ಅಧ್ಯಕ್ಷತೆ ವಹಿಸಿದ್ದರು.
ಅಪರ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್ ಮುಖ್ಯ ಅತಿಥಿಯಾಗಿದ್ದರು. ಕಣ್ಣೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯ ಮತ್ತು ಕಾಸರಗೋಡು ಸರ್ಕಾರಿ ಕಾಲೇಜು ಉಪನ್ಯಾಸಕ ಡಾ. ರಾಜು ಮುಖ್ಯ ಅತಿಥಿಗಳಾಗಿದ್ದರು. ಹೈಯರ್ ಸೆಕೆಂಡರಿ ಜಿಲ್ಲಾ ಸಂಯೋಜಕ ಸಿ.ವಿ.ಅರವಿಂದಾಕ್ಷನ್, ಎಂ.ಎಂ.ಮಧುಸೂದನನ್, ಕೆ.ಪಿ.ರಂಜಿತ್, ಸನಿಲ್ ಕುಮಾರ್ ವೆಳ್ಳುವ ಮೊದಲಾದವರು ಉಪಸ್ಥಿತರಿದ್ದರು. ಎರಡು ದಿನಗಳ ಶಿಬಿರದಲ್ಲಿ ಮಕ್ಕಳ ಹಕ್ಕುಗಳು, ಸಂವಿಧಾನ ಮತ್ತು ಪ್ರಜಾಪ್ರಭುತ್ವ, ಇಂಗ್ಲಿಷ್ ಸಂವಹನ ಮತ್ತು ನಾಟಕ ಕುರಿತದ ತರಗತಿ ನಡೆಯಲಿರುವುದು.