ಕಾಸರಗೋಡು: ಬೇಡಡ್ಕ ಗ್ರಾಮ ಪಂಚಾಯಿತಿ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಟೀಮ್ ಬೇಡಡ್ಕ ಕುಟುಂಬಶ್ರೀ ಆಗ್ರೋ ಫಾರ್ಮರ್ಸ್ ಪೆÇ್ರಡ್ಯೂಸರ್ ಕಂಪನಿಯ ಕಾಪೆರ್Çರೇಟ್ ಕಚೇರಿ ಮತ್ತು ಮಸಾಲೆ ಹುಡಿ ನಿರ್ಮಾಣ ಘಟಕದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಲಾಯಿತು. ಮಹಿಳೆಯರಿಂದಲೇ ರೂಪುಗೊಂಡಿರುವ ಸಂಸ್ಥೆ ಇದಾಗಿದೆ.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ, ವಕೀಲೆ, ಪಿ.ಸತೀದೇವಿ ಶಿಲಾನ್ಯಾಸ ನಡೆಸಿದರು. ಇದೇ ಸಂದರ್ಭ ಈ ವರ್ಷದ ವಂಗಾರಿ ಮಾತಾಯಿ ಸ್ಮಾರಕ ಜೀವ ವೈವಿಧ್ಯ ಪ್ರಶಸ್ತಿ ಪುರಸ್ಕøತ ಟೀಮ್ ಬೇಡಡ್ಕ ಸಂಸ್ಥೆಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಟಿ.ಟಿ.ಸುರೇಂದ್ರನ್ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು. ಟೀಮ್ ಬೆಡಡ್ಕ ಕಂಪನಿ ಸಿಇಒ ಶಿವನ್ ಚೂರಿ ಅವರಿಗೆ ವರದಿ ಮಂಡಿಸಿದರು. ವಂಗಾರಿ ಮಾತಾಯಿ ಅವರ ಆತ್ಮಚರಿತ್ರೆಯ ಅನುವಾದಿತ ಪುಸ್ತಕವನ್ನು ಡಾ.ಟಿ.ವನಜ ಅನಾವರಣಗೊಳಿಸಿದರು. ಸಮತಾ ಬುಕ್ಸ್ ಮ್ಯಾನೇಜಿಂಗ್ ಟ್ರಸ್ಟಿ ಪೆÇ್ರ.ಟಿ.ಎ.ಉಷಾಕುಮಾರಿ, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಸಿ.ಎಚ್.ಇಕ್ಬಾಲ್, ಕೆನರಾ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅನೂಪ್ ವಿಶ್ವಂ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇ.ಪದ್ಮಾವತಿ, ಪಂಚಾಯಿತಿ ಉಪಾಧ್ಯಕ್ಷ ಎ.ಮಾಧವನ್, ಟಿ.ವರದರಾಜ್, ಲತಾಗೋಪಿ, ವಸಂತಕುಮಾರಿ, ಸಾವಿತ್ರಿ ಬಾಲನ್, ಪಿ.ಶ್ರುತಿ, ಎನ್.ಎಂ.ಪ್ರವೀಣ್, ನಿಧಿಯಾ, ಎಂ.ಅನಂತನ್, ಇ.ರಾಘವನ್, ಟಿ.ಮೋಹನನ್ ಮತ್ತು ಎಂ.ಮಿನಿ ಉಪಸ್ಥಿತರಿದ್ದರು. ಕೆ.ಪ್ರಸನ್ನ ಸ್ವಾಗತಿಸಿದರು. ಎಂ.ಗುಲಾಬಿ ವಂದಿಸಿದರು.