ಕಾಸರಗೋಡು: ಜನ ಮೈತ್ರಿ ಪೆÇಲೀಸ್ ಹಾಗೂ ಟ್ರೌಮಾ ಕೇರ್ ಸಮಿತಿ ವತಿಯಿಂದ ವಿದ್ಯಾನಗರ ಲಯನ್ಸ್ ಕ್ಲಬ್‍ನಲ್ಲಿ ಬಿಆರ್‍ಸಿಯ ವಿಕಲಚೇತನ ಮಕ್ಕಳೊಂದಿಗೆ ಮಕ್ಕಳ ದಿನವನ್ನು ಆಚರಿಸಲಾಯಿತು.
ಕಾಸರಗೋಡು ಮಹಿಳಾ ಪೆÇಲೀಸ್ ಸಿ.ಐ ಲೀಲಾ ಕೆ ಸಮಾರಂಭ ಉದ್ಘಾಟಿಸಿದರು. ಟ್ರೌಮಾ ಕೇರ್ ಕಮಿಟಿ ಅಧ್ಯಕ್ಷ ಶಾಫಿ ಕಲ್ಲುವಳಪ್ ಅಧ್ಯಕ್ಷತೆ ವಹಿಸಿದ್ದರು. ಸಿಂಧು ಆರ್.ಬಿ.ಆರ್.ಸಿ, ರಾಧಿಕಾ ಸಂತೋಷ್ ಲಯನ್ಸ್ ಕ್ಲಬ್, ದಿವ್ಯಶ್ರೀ ಟೀಚರ್, ಮಹಿಳಾ ಪೆÇಲೀಸ್ ಎಸಿಡಬ್ಲ್ಯೂಓ ಸೋನಿಯಾ ಚಂದ್ರನ್, ಗೀಷ್ಮಾ, ರೇಷ್ಮಾ, ಜನಮೈತ್ರಿ ಪೆÇಲೀಸ್ ಬೀಟ್ ಅಧಿಕಾರಿ ಸಂತೋಷ್, ಬಶೀರ್ ಕೊಲ್ಲಂಪಾಡಿ ಶೇಖ್ ಫರೀದ್ ಉಪಸ್ಥಿತರಿದ್ದರು. ಜನಮೈತ್ರಿ ಪೆÇಲೀಸ್ ಕಾಸರಗೋಡು ಬೀಟ್ ಅಧಿಕಾರಿ ಕೃಪೇಶ್ ಸ್ವಾಗತಿಸಿದರು. ಟ್ರೌಮಾ ಕೇರ್ ಸಮಿತಿ ಜತೆ ಕಾರ್ಯದರ್ಶಿ ಕರೀಂ ಚೌಕಿ ವಂದಿಸಿದರು.