ಕಾಸರಗೋಡು: ರಂಗಚಿನ್ನಾರಿಯ ಅಂಗ ಸಂಸ್ಥೆ ನಾರಿಚಿನ್ನಾರಿಯ 10ನೆಯ ಸರಣಿ ಕಾರ್ಯಕ್ರಮ 'ಶರದ್ವಿಲಾಸ'ಕಾರ್ಯಕ್ರಮ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಜರುಗಿತು. ಈ ಸಂದರ್ಭ ಸಾಧಕರಿಗೆ ಸನ್ಮಾನ ಮತ್ತು ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಖ್ಯಾತ ಲೇಖಕಿ ವಿಜಯಾ ಸುಬ್ರಹ್ಮಣ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಾತೃ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ಮಾತೃತ್ವದ ಮಹತ್ವವನ್ನು ತಿಳಿದುಕೊಮಡವರಿಗೆ ಮಾತ್ರ ಸಮಾಜದಲ್ಲಿ ತಾಯಂದಿರಿಗಿರುವ ಮಹತ್ವ ಅರಿತುಕೊಳ್ಳಲು ಸಾದ್ಯ ಎಂದು ತಿಳಿಸಿದರು. ಈ ಸಂದರ್ಭ ಮಾಬ9ಲ್ ವ್ಯಾಪಾರದಲ್ಲಿ ಯಶಸ್ವೀ ಮಹಿಳಾ ಉದ್ಯಮಿಯಾಗಿ ಹೆಸರು ಪಡೆದ ಬಿಂದು ದಾಸ್ ಹಾಗೂ ಕೊರಗ ಸಮುದಾಯದ ಮೊದಲ ಮಹಿಳಾ ಸಾಧಕಿ ಮೀನಾಕ್ಷಿ ಬೊಡ್ಡೋಡಿ ಅವರನ್ನು ಹಾರ, ಫಲಪುಷ್ಪ ಮತ್ತು ಸ್ಮರಣಿಕೆಗಳನ್ನಿತ್ತು ಸನ್ಮಾನಿಸಲಾಯಿತು. ಸರ್ವಮಂಗಳಾಜಯ್ ಪುಂಚಿತ್ತಾಯ ಹಾಗೂ ವನಜಾಕ್ಷಿ ಚಂಬ್ರಕಾನ ಇವರು ಸನ್ಮಾನಿತರ ಸಾಧನೆಗಳನ್ನು ಪರಿಚಯಿಸಿದರು. ನಾರಿಚಿನ್ನಾರಿಯ ಅಧ್ಯಕ್ಷೆ ಸವಿತಾ ಟೀಚರ್ ನೇತೃತ್ವದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಬಿಂದು ದಾಸ್ ಅವರು ತಮಗೆ ನೀಡಿದ ಸನ್ಮಾನಕ್ಕೆ ಕೃತಜ್ಞತಾ ನುಡಿಗಳನ್ನಾಡಿದರು. ಮೀನಾಕ್ಷಿ ಬೊಡ್ಡೋಡಿಯವರು ಅಮ್ಮನ ಕುರಿತಾದ ಭಾವಪೂರ್ಣ ಕವನವನ್ನು ವಾಚಿಸಿದರು.
ಮಾಂಡೊಲಿನ್ ಮಾಂತ್ರಿಕ ಪ್ರಸಾದ್ ಹಾಗೂ ರಂಗ ಚಿನ್ನಾರಿಯ ಕೋಳಾರು ಸತೀಶ್ ಚಂದ್ರ ಭಂಡಾರಿಯವರು ಉಪಸ್ಥಿತರಿದ್ದರು. ಡಾ. ಯು. ಮಹೇಶ್ವರಿ ಅವರು ಪ್ರಾರ್ಥನೆ ಹಾಡಿದರು. ತೇಜಕುಮಾರಿ ಸ್ವಾಗತಿಸಿದರು. ನಾರಿಚಿನ್ನಾರಿಯ ಕಾರ್ಯದರ್ಶಿ ದಿವ್ಯಾ ಗಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಉಷಾ ರಾಮ್ ವಂದಿಸಿದರು. ರಂಗ ಚಿನ್ನಾರಿಯ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಮುಂದಿನ ಕಾರ್ಯಕ್ರಮದ ರೂಪರೇಷೆ ತೆಎದಿಟ್ಟರು.
ಈ ಸಂದರ್ಭ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅಪಣ9ಶೆಟ್ಟಿ ಮತ್ತು ನಂದನ (ಭರತನಾಟ್ಯ), ಧನ್ಯಾ ಕೃಷ್ಣ ಪ್ರಸಾದ್ (ಮೋಹಿನಿಯಾಟ್ಟಂ), ಕಾವ್ಯ ಎನ್. (ಭಾವಗೀತೆ), ಸರೋಜ ಸುಬ್ರಹ್ಮಣ್ಯ ಭಟ್ (ಶಾಸ್ತ್ರೀಯ ಸಂಗೀತ), ಅನ್ವಿತಾ ಕಾಮತ್ (ವೀಣಾ ವಾದನ), ಸುಜಾತ ಕನಿಯಾಲ (ತುಳು ಜನಪದ ಗೀತೆ), ಶೀನಾಶಿವದಾಸ್ (ಮಲಯಾಳಂ ಜನಪದ ಹಾಡು) ಹಾಗೂ ಶ್ರೀ ಲಕ್ಷ್ಮೀ ಶೆಣೈ (ಹರಿಕಥೆ) ಇವುಗಳನ್ನು ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಸೂರೆಗೊಂಡರು.