ನವದೆಹಲಿ: ಗಿಗ್ ಕಾರ್ಮಿಕರಿಗೆ ಸಂಬಂಧಿಸಿದ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸದ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ The Fairwork India Ratings 2023 ಬಿಡುಗಡೆಯಾಗಿದ್ದು, ಆ ಪ್ರಕಾರ ಟಾಟಾ ಕಂಪನಿ ಒಡೆತನದ ಬಿಗ್‌ಬಾಸ್ಕೆಟ್ ಅತಿ ಹೆಚ್ಚು ಅಂಕಗಳೊಂದಿಗೆ ಮುಂಚೂಣಿಯಲ್ಲಿದೆ.

ನ್ಯಾಯೋಚಿತ ವೇತನ, ಕರಾರುಗಳು, ಒಪ್ಪಂದಗಳು, ನಿರ್ವಹಣೆ ಮತ್ತು ಪ್ರಾತಿನಿಧ್ಯಗಳನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗಿದೆ. ಈ ಸೌಲಭ್ಯಗಳನ್ನು ಒದಗಿಸುವುದರಲ್ಲಿ ಬಿಗ್‌ಬಾಸ್ಕೆಟ್ ಮುಂದಿದೆ.
ಪಟ್ಟಿಯ ಪ್ರಕಾರ ಬಿಗ್‌ಬಾಸ್ಕೆಟ್ ನಂತರದ ಸ್ಥಾನಗಳನ್ನು BluSmart, Swiggy, Urban Company and Zomato ಪಡೆದಿವೆ. ಬಿಗ್ ಬಾಸ್ಕೆಟ್ 10 ಅಂಕಗಳಿಗೆ 6 ಅಂಗಳನ್ನು ಪಡೆದು ಅಗ್ರಸ್ಥಾನದಲ್ಲಿದ್ದರೆ ನಂತರದ ಕಂಪನಿಗಳು ತಲಾ ಐದು ಅಂಕಗಳನ್ನು ಪಡೆದಿವೆ.
ಪಟ್ಟಿ ಪ್ರಕಾರ Ola ಮತ್ತು Porter ಕಂಪನಿಗಳು ಗಿಗ್ ಕೆಲಸಗಾರರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳನ್ನು ನಿರ್ಮಿಸಿ ಕೊಡುವುದರಲ್ಲಿ ಸಂಪೂರ್ಣ ವಿಫಲವಾಗಿದ್ದು 10 ಅಂಕಗಳಿಗೆ ಶೂನ್ಯ ಅಂಕ ಪಡೆದಿವೆ.
Amazon Flex, BigBasket, BluSmart, Dunzo, Flipkart, Ola, Porter, Swiggy, Uber, Urban Company, Zepto ಮತ್ತು Zomato ಎಂಬ 12 ಕಂಪನಿಗಳನ್ನು ಸಮೀಕ್ಷೆ ನಡೆಸಲಾಗಿತ್ತು.
ಫೇರ್‌ವರ್ಕ್ ಇಂಡಿಯಾ ತಂಡವನ್ನು ಸೆಂಟರ್ ಫಾರ್ ಐಟಿ ಮತ್ತು ಪಬ್ಲಿಕ್ ಪಾಲಿಸಿ (ಸಿಐಟಿಎಪಿಪಿ), ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಸಂಸ್ಥೆಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಮುನ್ನಡೆಸಿವೆ.
Swiggy, Zomato, Amazon, Flipkart ಅಂತಹ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರನ್ನು ಗಿಗ್ ಕಾರ್ಮಿಕರು ಎನ್ನುತ್ತಾರೆ.