ಕೊರೊನಾ ಬಳಿಕ ಹೃದಯಾಘಾತದ ಸುದ್ದಿ ಹೆಚ್ಚಾಗಿಯೇ ಕೇಳಿ ಬರುತ್ತಿತ್ತು, ಚಿಕ್ಕ ಚಿಕ್ಕ ಹುಡುಗರು, ಫಿಟ್ ಆಗಿರುವವರು ಹೃದಯಾಘಾತದಿಂದ ಸಾವನ್ನಪ್ಪಿರುವ ಅನೇಕ ಸುದ್ದಿಗಳನ್ನು ಕೇಳಿದ್ದೇವೆ. ಮದುಮಗ ಮಂಟಪದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ , ಮದುಮಗಳಿಗೆ ಹೃದಯಾಘಾತವಾಯ್ತು, ಜಾತ್ರೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸಿದ ಮಗು ಸಾವನ್ನಪ್ಪಿತ್ತು ಈ ಬಗೆಯ ಸುದ್ದಿಗಳನ್ನು ಕೇಳುವಾಗಲೇ ಒಂಥರಾ ಭಯದ ಜೊತೆಗೆ ಇದಕ್ಕೆ ಕೊರೊನಾ ಲಸಿಕೆ ಕಾರಣವಾಗಿರಬಹುದೇ ಎಂಬ ಸಂಶಯ ಜನರಲ್ಲಿ ಮೂಡಿತು.
ಚಿಕ್ಕ ಪ್ರಾಯದರಲ್ಲಿ ಹೃದಯಾಘಾತ
ಹೃದಯಾಘಾt ಹೊಸತಲ್ಲ, ತುಂಬಾ ದಪ್ಪವಿರುವವರಲ್ಲಿ, ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಇರುವವರಲ್ಲಿ ಹೃದಯಾಘಾತ ಕಂಡು ಬರುವುದು ಸಹಜವಾಗಿತ್ತು, ಅದರಲ್ಲೂ 40 ವರ್ಷ ಮೇಲ್ಪಟ್ಟವರಲ್ಲಿ ಈ ರೀತಿ ಹೃದಯಾಘಾತ ಕಾಣಿಸುತ್ತಿತ್ತು, ಆದರೆ ಇತ್ತೀಚೆಗೆ 25-30 ವರ್ಷದವರಲ್ಲಿ, ಸ್ಕೂಲ್‌ಗೆ ಹೋಗುವ ಮಕ್ಕಳಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವುದು, ಅದರಲ್ಲೂ ಫಿಟ್ ಅಂಡ್ ಫೈನ್ ಆಗಿದ್ದವರಲ್ಲೂ ಹೃದಯಾಘಾತ ಕಂಡು ಬರುತ್ತಿರುವುದು ಆಘಾತಕರ ಸಂಗತಿಯಾಗಿದೆ, ಕೊರೊನಾ ಬಳಿಕ ಈ ರೀತಿ ಕಂಡು ಬರುತ್ತಿರುವುದರಿಂದ ಇದಕ್ಕೆ ಕೊರೊನಾ ಲಸಿಕೆ ಕಾರಣವಾಗಿರಬಹುದೇ ಎಂಬ ಸಂಶಯ ಮೂಡಿತು.
ಸಂಪೂರ್ಣ ಅಧ್ಯಯನ ಮಾಡಿ ವರದಿ ನೀಡಿದ ICMR(Indian Council of Medical Research).
ಕೊರೊನಾ ಲಸಿಕೆ ಬಗ್ಗೆ ಈ ರೀತಿ ಸಂಶಯ ಬಂದಾಗ ಇದರ ಬಗ್ಗೆ ಸಂಶೋಧನೆ ಮಾಡಿ ವರದಿ ನೀಡುವುದಾಗಿ ICMR ಹೇಳಿತ್ತು, ಅದರಂತೆ ಈ ಕುರಿತು ಒಂದು ಸ್ಪಷ್ಟ ವರದಿ ನೀಡಿದೆ. ಹೃದಯಾಘಾತ ಹೆಚ್ಚಾಗಲು ಕೊರೊನಾ ಲಸಿಕೆ ಕಾರಣವಲ್ಲ ಎಂದು ICMR ದೃಢಪಡಿಸಿದೆ.
18-45 ವರ್ಷದೊಳಗಿನವರಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಹೃದಯಾಘಾತ ಉಂಟಾಗಿದೆ, ಇದಕ್ಕೆ ಕಾರಣವೇನು ಎಂಬುವುದರ ಬಗ್ಗೆ ಅಧಿಯನ ನಡೆಸಿದೆ, ಹೀಗೆ ಮರಣವೊಂದಿದವರಲ್ಲಿ 729 ಕೇಸ್‌ಗಳನ್ನು ಅಧ್ಯಯನ ಮಾಡಲಾಯಿತು. ಅವರಿಗೇನಾದರೂ ಆರೋಗ್ಯ ಸಮಸ್ಯೆ ಇತ್ತೇ? ಅವರಿಗೆ ಏನಾದರೂ ಚಟವಿತ್ತೇ? ಅವರ ಆಹಾರ ಅಭ್ಯಾಸ ಹೇಗಿತ್ತು? ಧೂಮಪಾನದಂಥ ಚಟವಿತ್ತೇ, ಕೋವಿಡ್ ತಗುಲಿತ್ತೇ, ಅದರಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರಾ?, ಅವರಿಗೆ ಯಾವುದಾದರೂ ವ್ಯಾಕ್ಸಿನ್ ಡೋಸ್ ನೀಡಿದಾಗ ಆರೋಗ್ಯದಲ್ಲಿ ಏನಾದರೂ ಬದಲಾವಣೆಯಾಗಿತ್ತೆ ಈ ಬಗ್ಗೆ ಎಲ್ಲಾ ವಿವರಗಳನ್ನು ಸಂಗ್ರಹಿಸಲಾಯಿತು.
ಅಧ್ಯಯನದಿಂದ ಸ್ಪಷ್ಟವಾಗಿ ತಿಳಿದು ಬಂದ ಅಂಶವೇನು?
ಕೋವಿಡ್ 19 ಲಸಿಕೆಯಿಂದಾಗಿ ಹೃದಯಾಘಾತ ಹೆಚ್ಚಾಗಿಲ್ಲ, ಬದಲಿಗೆ ಜೀವನಶೈಲಿ ಹಾಗೂ ಕೆಲ ಆರೋಗ್ಯ ಸಮಸ್ಯೆಯಿಂದಾಗಿ ಈ ರೀತಿ ಸಂಭವಿಸುತ್ತಿದೆ ಎಂಬುವುದಾಗಿ ಹೇಳಿದೆ.
ಹೃದಯಾಘಾತಕ್ಕೆ ಕಾರಣವೇನಿರಬಹುದು? ICMR ಹೇಳುವುದೇನು?
* ದೈಹಿಕ ಚಟುವಟಿಕೆ ಇಲ್ಲದಿರುವುದು: ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದರೆ ದೈಹಿಕ ವ್ಯಾಯಾಮ ಇಲ್ಲದಿರುವುದು. ಬಹಳಷ್ಟು ಜನರು ಯಾವುದೇ ದೈಹಿಕ ವ್ಯಾಯಾಮ ಮಾಡುತ್ತಿಲ್ಲ. ನಾವೇನೂ ದಪ್ಪವಿಲ್ಲ ನಮಗೆ ವ್ಯಾಯಾಮ ಅಗ್ಯತವಿಲ್ಲ ಎಂದೇ ಭಾವಿಸುತ್ತಾರೆ, ಆದರೆ ಅದು ತಪ್ಪು ಕಲ್ಪನೆ, ನಾವು ಸಣ್ಣವಿರಲಿ, ದಪ್ಪವಿರಲಿ ಆರೋಗ್ಯವಾಗಿರಬೇಕೆಂದರೆ ವ್ಯಾಯಾಮ ಮಾಡಬೇಕು.
ಅನಾರೋಗ್ಯಕರ ಆಹಾರಶೈಲಿ: ಅತಿಯಾದ ಫಾಸ್ಟ್ ಫುಡ್ ಸೇವನೆ, ಅನಾರೋಗ್ಯಕರವಾದ ಆಹಾರ ಸೇವನೆ, ಅತಿಯಾದ ಕೊಬ್ಬಿನಂಶದ ಆಹಾರ ಸೇವನೆ ಇವೆಲ್ಲಾ ಹೃದಯಾಘಾತಕ್ಕೆ ಕಾರಣ.
ಧೂಮಪಾನ: ಅತಿಯಾಗಿ ಧೂಮಪಾನ ಕೂಡ ಹೃದಯಘಾತಕ್ಕೆ ಕಾರಣ, ಅತಿಯಾಗಿ ಧೂಮಪಾನ ಮಾಡುವುದರಿಂದ ಶ್ವಾಸಕೋಶದ ಆರೋಗ್ಯ ಹಾಳಾಗುವುದು, ಇದು ಕೂಡ ಹೃದಯಾಘಾತದ ಸಾಧ್ಯತೆ ಹೆಚ್ಚಿಸುವುದು.
ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ: ಕೋವಿಡ್ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗಿರುವವರು ತಮ್ಮ ಆರೋಗ್ಯದ ಕಡೆ ತುಂಬಾ ಗಮನಹರಿಸಬೇಕು.
ಕೋವಿಡ್ ನಂತರ ಕೂಡ ನಿಯಮಿತ ತಪಾಸಣೆ ಮಾಡುವುದರಿಂದ ಈ ರೀತಿಯ ಸಮಸ್ಯೆ ತಡೆಗಟ್ಟಬಹುದು.
ಹೃದಯಾಘಾತ ತಡೆಗಟ್ಟಲು ಏನು ಮಾಡಬೇಕು?
ಈವಾಗ ಹೃದಯಾಘಾತ ಯಾರಿಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸ.
ದೈಹಿಕ ವ್ಯಾಯಾಮ: ಪ್ರತಿನಿತ್ಯ ಅರ್ಧ ಗಂಟೆ ವ್ಯಾಯಾಮ ಮಾಡಿ, ಗದ್ದೆ, ತೋಟದಲ್ಲಿ ಕೆಲಸ ಮಾಡುವವರಿಗೆ ದೈಹಿಕ ವ್ಯಾಯಾಮ ಸಿಗುವುದು. ಆದರೆ ಆಫೀಸ್‌ನಲ್ಲಿ ಒಂದೇ ಕಡೆ ಕೂತು ಕೆಲಸ ಮಾಡುವವರು ದೈಹಿಕ ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.
ಮಕ್ಕಳ ದೈಹಿಕ ವ್ಯಾಯಾಮ ಕಡೆ ಗಮನಹರಿಸಿ: ಮಕ್ಳಳು ಮನೆಯೊಳಗಡೆಯೇ ಇರುವುದು ಆರೋಗ್ಯಕರವಲ್ಲ, ಕೆಲವೊಂದು ಶಾಲೆಯಲ್ಲಿ ಗ್ರೌಂಡ್ ಕೂಡ ಇರುವುದಿಲ್ಲ, ಮಕ್ಕಳಿಗೆ ದೈಹಿಕ ವ್ಯಾಯಾಮ ತುಂಬಾನೇ ಮುಖ್ಯ. ಆದ್ದರಿಂದ ಮಕ್ಕಳ ಜೊತೆ ಅವರಿಗೆ ದೈಹಿಕವಾಗಿ ವ್ಯಾಯಾಮ ದೊರೆಯುವ ಆಟಗಳನ್ನು ಆಡಿ, ಅವರನ್ನು ಪಾರ್ಕ್‌ಗೆ ಕರೆದುಕೊಂಡು ಹೋಗಿ ಆಡಿಸಿ, ಶಾಲೆಯೂ ಕೂಡ ಬರೀ ಕಲಿಕೆಯಲ್ಲ ಮಕ್ಕಳ ದೈಹಿಕ ಆರೋಗ್ಯದ ಕಡೆ ಗಮನಹರಿಸಬೇಕು.
ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ:
ಅತಿಯಾದ ಮಾನಸಿಕ ಒತ್ತಡ ಕೂಡ ಹೃದಯಾಘಾತಕ್ಕೆ ಕಾರಣವಾಗುವುದರಿಂದ ನೀವು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಧ್ಯಾನ ಮಾನಸಿಕ ಒತ್ತಡ ಕಡಿಮೆ ಮಾಡಲು ಸಹಕಾರಿ. ಆಹಾರಕ್ರಮ:
ಸಮತೋಲನ ಆಹಾರ ಸೇವಿಸಿ, ಜಂಕ್‌ಫುಡ್‌ಗಳಿಂದ ದೂರವಿರಿ, ನಮ್ಮ ಹಿರಿಯರು ಪಾಲಿಸುತ್ತಿರುವ ಆಹಾರಕ್ರಮದ ಕಡೆಗೆ ಗಮನಹರಿಸಿ. ಸಂಸ್ಕರಿಸಿದ ಆಹಾರ ಸೇವಿಸಬೇಡಿ. ನಾರಿನ ಪದಾರ್ಥಗಳು ಅಧಿಕವಿರುವ ಆಹಾರಸೇವಿಸಿ. ಹೊರಗಡೆಯ ಆಹಾರ ಸೇವಿಸುವ ಬದಲಿಗೆ ಮನೆಯೂಟ ಸೇವಿಸಿ, ಮಾಂಸಾಹಾರ ಮಿತಿಯಲ್ಲಿ ಸೇವಿಸಿ. ಹೃದಯ ಸಂಬಂಧಿ
ಸಮಸ್ಯೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
ಅಜೀರ್ಣ, ಎದೆಯುರಿ ಹೀಗೆ ಹೃದಯ ಸಂಬಂಧಿ ಸಮಸ್ಯೆ ಬಂದರೆ ಅದು ಚಿಕ್ಕಪುಟ್ಟ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡಲು ಹೋಗಬೇಡಿ.
ಹೃದಯಾಘಾತದ ಲಕ್ಷಣಗಳು
* ಎದೆನೋವು, ಎದೆಯಲ್ಲಿ ಬಿಗಿಯಾದ ಅನುಭವ, ಹಿಂಡಿದಂತಾಗುವುದು, ನೋವು * ತೋಳಿನಲ್ಲೂ ನೋವು ಕಂಡು ಬರುವುದು, ದವಡೆಯಲ್ಲಿಯೂ ನೋವು ಕಂಡು ಬರುವುದು * ಮೈ ತುಂಬಾನೇ ಬೆವರುವುದು * ತಲೆಸುತ್ತು * ಎದೆಯುರಿ, ಅಜೀರ್ಣ * ತಲೆನೋವು * ವಾಂತಿ * ಉಸಿರಾಟದಲ್ಲ ತೊಂದರೆ ಈ ಲಕ್ಷಣಗಳು ಕಂಡು ಬಂದಾಗ ನಿರ್ಲಕ್ಷ್ಯ ಮಾಡಬೇಡಿ, ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರನ್ನು ಭೇಟಿಯಾಗಿ, ಒಂದು ಕ್ಷಣವೂ ತಡಮಾಡಬೇಡಿ, ಗೋಲ್ಡನ್ ಅವರ್‌ನಲ್ಲಿ ಅಂದರೆ ಹೃದಯಾಗವಾತವಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ದೊರೆತರೆ ವ್ಯಕ್ತಿ ಬದುಕಿಳಿಯುವ ಸಾಧ್ಯತೆ ಹೆಚ್ಚು.