ಜೆರುಸಲೇಂ: ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಹಾಗೂ ಕದನ ವಿರಾಮ ಜಾರಿ ವಿಳಂಬವಾಗಲಿದೆ. ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಶುಕ್ರವಾರದವರೆಗೆ ಪ್ರಾರಂಭವಾಗುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ಜೆರುಸಲೇಂ: ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಹಾಗೂ ಕದನ ವಿರಾಮ ಜಾರಿ ವಿಳಂಬವಾಗಲಿದೆ. ಒತ್ತೆಯಾಳುಗಳ ಬಿಡುಗಡೆ ಪ್ರಕ್ರಿಯೆ ಶುಕ್ರವಾರದವರೆಗೆ ಪ್ರಾರಂಭವಾಗುವುದಿಲ್ಲ ಎಂದು ಇಸ್ರೇಲ್ ಹೇಳಿದೆ.
ಇಸ್ರೇಲ್ ಹಾಗೂ ಹಮಾಸ್ ನಡುವೆ 4 ದಿನಗಳ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿದೆ.
'ಹಮಾಸ್ ವಶದಲ್ಲಿರುವ 50 ಇಸ್ರೇಲಿ ಹಾಗೂ ವಿದೇಶಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಮಾತುಕತೆ ಜಾರಿಯಲ್ಲಿದೆ. ಆದರೆ ಈ ಪ್ರಕ್ರಿಯೆ ಶುಕ್ರವಾರದವರಗೆ ಪ್ರಾರಂಭವಾಗುವುದಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಬಗ್ಗೆ ನಮ್ಮ ಪ್ರಯತ್ನ ಸುಧಾರಿಸುತ್ತಿದೆ. ಉಭಯ ಪಕ್ಷಗಳು ಒಪ್ಪಿದ ಮೂಲ ಒಪ್ಪಂದದ ಪ್ರಕಾರ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ' ಎಂದು ಇಸ್ರೇಲ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಝಚಿ ಹನೇಗ್ಬಿ ಹೇಳಿದ್ದಾರೆ.
ಒತ್ತೆಯಾಳುಗಳ ಬಿಡುಗಡೆ ವಿಳಂಬಕ್ಕೆ ನಿಖರ ಕಾರಣ ಏನೆಂಬುದು ಖಚಿತವಾಗಿಲ್ಲ. ಹಮಾಸ್ ಬಂಡುಕೋರರು ಬಿಡುಗಡೆ ಮಾಡಲಿರುವ 50 ಮಂದಿ ಒತ್ತೆಯಾಳುಗಳ ಪೈಕಿ 3 ಅಮೆರಿಕನ್ನರು ಸೇರಿದ್ದಾರೆ.
ಇಸ್ರೇಲ್‌ನ ವಿರೋಧದ ಹೊರತಾಗಿಯೂ ಗುರುವಾರದಿಂದ ಒಪ್ಪಂದ ಜಾರಿಯಾಗಲಿದೆ. ಅದುವರೆಗೆ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕತಾರ್, ಈಜಿಪ್ಟ್ ಹಾಗೂ ಅಮೆರಿಕವು ಈ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿತ್ತು. ಯುದ್ಧ ಆರಂಭವಾದ 47 ದಿನಗಳ ಬಳಿಕ ರಾಜತಾಂತ್ರಿಕ ಮಾತುಕತೆಗೆ ಸಿಕ್ಕಿದ ಮೊದಲ ಜಯ ಇದಾಗಿದೆ.