ಗುವಾಹಟಿ: ಇಂಫಾಲ್ ಕಣಿವೆ ಮೂಲದ ಬಂಡುಕೋರ ಗುಂಪಿನೊಂದಿಗೆ ನಮ್ಮ ಸರ್ಕಾರ ಶಾಂತಿ ಮಾತುಕತೆ ನಡೆಸುತ್ತಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಗುವಾಹಟಿ: ಇಂಫಾಲ್ ಕಣಿವೆ ಮೂಲದ ಬಂಡುಕೋರ ಗುಂಪಿನೊಂದಿಗೆ ನಮ್ಮ ಸರ್ಕಾರ ಶಾಂತಿ ಮಾತುಕತೆ ನಡೆಸುತ್ತಿದೆ ಎಂದು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಿಳಿಸಿದ್ದಾರೆ.
ಮೇ 3ರಂದು ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಬಂಡುಕೋರರೊಂದಿಗೆ ರಾಜ್ಯ ಸರ್ಕಾರ ನಡೆಸುತ್ತಿರುವ ಮಾತುಕತೆ ಕುರಿತು ಇದೇ ಮೊದಲ ಬಾರಿಗೆ ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ನಿಷೇಧಿತ ಸಂಯುಕ್ತ ರಾಷ್ಟ್ರೀಯ ಮುಕ್ತ ರಂಗದ (ಯುಎನ್‌ಎಲ್‌ಎಫ್) ಒಂದು ಬಣದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈಚೆಗೆ ದೇಶ ವಿರೋಧಿ ಚಟುವಟಿಕೆಗಳ ಆರೋಪದಡಿ ಮೈತೇಯಿ ಸಮುದಾಯದ ಏಳು ಸಂಘಟನೆಗಳು, ಅವುಗಳ ನಾಲ್ಕು ಅಂಗಸಂಸ್ಥೆಗಳನ್ನು ಐದು ವರ್ಷಗಳಿಗೆ ಕೇಂದ್ರ ಸರ್ಕಾರ ನಿಷೇಧಿಸಿತ್ತು.
ಈ ಸಂಘಟನೆಗಳ ಕಾರ್ಯ ಚಟುವಟಿಕೆಗಳು ದೇಶದ ಸಾರ್ವಭೌಮತೆ ಮತ್ತು ಏಕತೆಗೆ ಸವಾಲು ಒಡ್ಡಿದ್ದವು. ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಮೇಲಿನ ಹಲ್ಲೆ ಕೃತ್ಯಗಳಲ್ಲೂ ಈ ಸಂಘಟನೆಗಳು ಭಾಗಿಯಾಗಿದ್ದವು ಎಂದು ಸರ್ಕಾರ ತಿಳಿಸಿತ್ತು.
ನಿಷೇಧಿತ ಸಂಘಟನೆಗಳು ಭಾರತದಿಂದ ಮಣಿಪುರವನ್ನು ಪ್ರತ್ಯೇಕಿಸಿ ಸ್ವತಂತ್ರ ರಾಷ್ಟ್ರ ಮಾಡುವ ಗುರಿ ಹೊಂದಿದ್ದವು ಎಂದೂ ಸರ್ಕಾರ ತಿಳಿಸಿತ್ತು.