ಮುಂಬೈ: ಬೆಳ್ಳಿತೆರೆಯ ಮೇಲೆ ಹಲವು ರಿಯಾಲಿಟಿ ಶೋಗಳ ಮೂಲಕ ತನ್ನ ಪ್ರತಿಭೆ ಪ್ರದರ್ಶಿಸುತ್ತಿರುವ ಶ್ವೇತಾ ಶಾರದಾ ಎಲ್. ಸಾಲ್ವಡಾರ್‌ನ ಸ್ಯಾನ್ ಸಾಲ್ವಡಾರ್‌ನಲ್ಲಿ ನಡೆಯುತ್ತಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. 23ರ ಹರೆಯದ ಶಾರದಾ ಚಂಡೀಗಢ ಮೂಲದವರು.
ಶ್ವೇತಾ ಶಾರದಾ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ದೀವಾನೆ ಮತ್ತು ಡ್ಯಾನ್ಸ್ ಪ್ಲಸ್ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳ ಮೂಲಕ ತೆರೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಈ ಪ್ರತಿಭಾವಂತೆ ಈಗ ಜಾಗತಿಕವಾಗಿ ಗುರುತಿಸುವ ಕಾಲ ಸನ್ನಹಿತವಾಗಿದೆ.
ಶ್ವೇತಾ ಶಾರದಾ ಆಗಸ್ಟ್‌ನಲ್ಲಿ ಮಿಸ್ ದಿವಾ ಯೂನಿವರ್ಸ್ 2023 ಕಿರೀಟವನ್ನು ಗೆದ್ದ ನಂತರ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾದರು. ಮಿಸ್ ದಿವಾ ಅವರ ಅಧಿಕೃತ ಇನ್ಸ್ಟಾಗ್ರಾಮ್ ಪುಟವು ಶಾರದಾ ಅವರ ವೀಡಿಯೊವನ್ನು ಹಂಚಿಕೊಂಡಿದೆ. 72ನೇ ವಿಶ್ವ ಸುಂದರಿ ಸ್ಪರ್ಧೆಯು ಎಲ್. ಸಾಲ್ವಡಾರ್‌ನಲ್ಲಿ ನವೆಂಬರ್ 18 ರಂದು 90 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳೊಂದಿಗೆ ನಡೆಯಲಿದೆ, ಭಾರತವನ್ನು ಶ್ವೇತಾ ಶಾರದಾ ಪ್ರತಿನಿಧಿಸಲಿದ್ದಾರೆ.
ಯಾರು ಈ ಶಾರದಾ :
ಶ್ವೇತಾ ಶಾರದಾ ಮೇ 24, 2000 ರಂದು ಚಂಡೀಗಢದಲ್ಲಿ ಜನಿಸಿದರು. ತಾಯಿ ಆಶ್ರಯದಲ್ಲಿ ಬೆಳೆದ ಆಕೆ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದು, ಮಾಡೆಲಿಂಗ್‌ನಲ್ಲಿ ಮುಂದುವರಿಯಲು ನಿರ್ಧರಿಸಿದರು. ತನ್ನ ಆಸೆ ಈಡೇರಿಸಿಕೊಳ್ಳಲು ತನ್ನ 16 ನೇ ವಯಸ್ಸಿಗೇ ಮುಂಬೈಗೆ ತೆರಳಿದರು. ಬಳಿಕ ಆಕೆ ಅಲ್ಲಿ ವಿವಿಧ ರಿಯಾಲಿಟಿ ಶೋಗಳ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಿದ್ದು, ನೃತ್ಯ ರಿಯಾಲಿಟಿ ಶೋ ಜಲಕ್ ದಿಖ್ಲಾ ಜಾದಲ್ಲಿ ನೃತ್ಯ ಸಂಯೋಜಕಿಯಾಗಿದ್ದರು. ಜುಬಿನ್ ನೌಟಿಯಾಲ್ ಮತ್ತು ತುಳಸಿ ಕುಮಾರ್ ಅವರ ಮಸ್ತ್ ಆಂಖೇನ್ ಹಾಡಿನ ಮ್ಯೂಸಿಕ್ ವಿಡಿಯೋದಲ್ಲಿ ಶ್ವೇತಾ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅವರು ವೀಡಿಯೊದಲ್ಲಿ ಗಂಗೂಬಾಯಿ ಕತಿವಾಡಿ ನಟ ಶಂತನು ಮಹೇಶ್ವರಿ ಅವರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.