HEALTH TIPS

UNESCO: ಸೃಜನಶೀಲ ನಗರಗಳ ಪಟ್ಟಿಗೆ ಗ್ವಾಲಿಯರ್‌, ಕೋಯಿಕ್ಕೋಡ್‌ ಸೇರ್ಪಡೆ

              ವದೆಹಲಿ: ಯುನೆಸ್ಕೊ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ ನಗರಗಳ ಪಟ್ಟಿಗೆ ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಕೇರಳದ ಕೋಯಿಕ್ಕೋಡ್‌ ಸೇರ್ಪಡೆಯಾಗಿವೆ.

               ವಿಶ್ವ ನಗರಗಳ ದಿನಾಚರಣೆ ಅಂಗವಾಗಿ ಸಿದ್ಧಪಡಿಸಿರುವ ವಿಶ್ವದ ಸೃಜನಶೀಲ 55 ನಗರಗಳ ಪಟ್ಟಿಯಲ್ಲಿ ಭಾರತದ ಈ ಎರಡೂ ಸೇರಿವೆ.

               ಈ ಬಗ್ಗೆ ತನ್ನ ವೆಬ್‌ಸೈಟ್‌ನಲ್ಲಿ ಯುನೆಸ್ಕೊ ಮಂಗಳವಾರ ಅಧಿಕೃತವಾಗಿ ಪ್ರಕಟಿಸಿದೆ.

ನರೇಂದ್ರ ಮೋದಿ, ಪ್ರಧಾನಿಜಾಗತಿಕ ವೇದಿಕೆಯಲ್ಲಿ ಭಾರತೀಯ ಸಂಸ್ಕೃತಿಯು ಅನುರಣಿಸಿರುವುದು ಹೆಮ್ಮೆಯ ಸಂಗತಿ. ಈ ಸಾಧನೆಗೆ ಕಾರಣರಾದ ಎರಡೂ ನಗರಗಳ ನಾಗರಿಕರು ಅಭಿನಂದನೆಗೆ ಅರ್ಹರಾಗಿದ್ದಾರೆ.

                ಸಂಗೀತ ವಿಭಾಗದಲ್ಲಿ ಗ್ವಾಲಿಯರ್‌ ಸೇರ್ಪಡೆಯಾದರೆ, ಸಾಹಿತ್ಯ ಕ್ಷೇತ್ರದಲ್ಲಿ ಕೋಯಿಕ್ಕೋಡ್‌ಗೆ ಈ ಮಾನ್ಯತೆ ಸಿಕ್ಕಿದೆ.

                 'ಸಾಹಿತ್ಯ ಹಾಗೂ ಸೃಜನಶೀಲತೆಯು ಈ ನಗರಗಳ ಅಭಿವೃದ್ಧಿಯ ಕಾರ್ಯತಂತ್ರದ ಭಾಗವಾಗಿವೆ. ಮಾನವ ಕೇಂದ್ರಿತ ನಗರಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿಯೂ ನಾವೀನ್ಯದ ಹೊಸ ಪರಿಪಾಠಕ್ಕೂ ಮುನ್ನುಡಿ ಬರೆದಿವೆ' ಎಂದು ಯುನೆಸ್ಕೊ ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries