ಲಖನೌ: ಈ ಹಿಂದೆ ಟ್ವೀಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್ ನಲ್ಲಿ ಭಾರತ ರಾಜಕೀಯದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಒಬ್ಬರಾಗಿದ್ದಾರೆ ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಹ್ಯಾಶ್‌ಟ್ಯಾಗ್ ಟ್ರ್ಯಾಕಿಂಗ್ ಟೂಲ್ ಟ್ವೀಟ್ ಬೈಂಡರ್ ನಿಂದ ಈ ಟ್ರೆಂಡ್ ದೃಢಪಟ್ಟಿದೆ ಎಂದು ಅವರು ಹೇಳಿದ್ದಾರೆ.
ಟ್ವೀಟ್ ಬೈಂಡರ್‌ನ ಇತ್ತೀಚಿನ ವರದಿಯ ಪ್ರಕಾರ, ಅಕ್ಟೋಬರ್‌ನಲ್ಲಿ ಎಕ್ಸ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ನಂತರ, ಯೋಗಿ ಆದಿತ್ಯನಾಥ್ ಹೆಚ್ಚಿನದಾಗಿ ಗಮನ ಸೆಳೆದಿದ್ದಾರೆ. ಅಕ್ಟೋಬರ್ 1 ರಿಂದ 31 ರವರೆಗೆ ಭಾರತದಲ್ಲಿ X ನಲ್ಲಿ ಬಳಕೆದಾರರು ಮಾಡಿದ ಪೋಸ್ಟ್‌ಗಳ ಸಂಖ್ಯೆಯನ್ನು ವಿಶ್ಲೇಷಿಸುವ ಮೂಲಕ ಟ್ವೀಟ್ ಬೈಂಡರ್ ತನ್ನ ವರದಿ ನೀಡಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಟ್ವೀಟ್ ಬೈಂಡರ್ ವರದಿಯ ಪ್ರಕಾರ, ಅಕ್ಟೋಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್ ಖಾತೆ ಕುರಿತು ಹೆಚ್ಚಿನ ಮಟ್ಟದ ಚರ್ಚೆಯಾಗಿದೆ. ತದನಂತರ ಸಿಎಂ ಯೋಗಿ ಆದಿತ್ಯನಾಥ್ ಎರಡನೇ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ವಕ್ತಾರರು ವರದಿಯನ್ನು ಉಲ್ಲೇಖಿಸಿದ್ದಾರೆ.
ಒಟ್ಟಾರೆ ಪ್ರಧಾನಿ ಮೋದಿ, ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ದಕ್ಷಿಣ ನಟ ವಿಜಯ್ ಮಾತ್ರ ಯೋಗಿಗಿಂತ ಮುಂದಿದ್ದಾರೆ. ಯೋಗಿ ಆದಿತ್ಯನಾಥ್ ಎಕ್ಸ್ ನಲ್ಲಿ 2.65 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ.