ನವದೆಹಲಿ: ದೇಶದಲ್ಲಿ 157 ಮಂದಿಗೆ ಕರೋನಾ ಉಪವಿಧದ ಜೆಎನ್-1 ಇರುವುದು ದೃಢಪಟ್ಟಿದೆ ಎಂದು INSACOG ಮಾಹಿತಿ ನೀಡಿದೆ. ಕೇರಳದಲ್ಲಿ ಅತಿ ಹೆಚ್ಚು ಜೆಎನ್-1 ರೋಗಿಗಳಿದ್ದಾರೆ.
ಕೇರಳದಲ್ಲಿ 78 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೆ ಒಂಬತ್ತು ರಾಜ್ಯಗಳಲ್ಲಿ ಈ ರೋಗ ವರದಿಯಾಗಿದೆ.
ಜೆಎನ್-1 ರೋಗಿಗಳ ಸಂಖ್ಯೆಯಲ್ಲಿ ಗುಜರಾತ್ ಎರಡನೇ ಸ್ಥಾನದಲ್ಲಿದೆ. ಗುಜರಾತ್‍ನಲ್ಲಿ 34 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ರಾಜ್ಯಗಳ ಅಂಕಿ ಅಂಶಗಳೆಂದರೆ ಗೋವಾ (18), ಕರ್ನಾಟಕ (ಎಂಟು), ಮಹಾರಾಷ್ಟ್ರ (ಏಳು), ರಾಜಸ್ಥಾನ (ಐದು), ತಮಿಳುನಾಡು (ನಾಲ್ಕು), ತೆಲಂಗಾಣ (ಎರಡು) ಮತ್ತು ದೆಹಲಿ (ಒಂದು).
ಡಿಸೆಂಬರ್‍ನಲ್ಲಿ 141 ಜೆಎನ್-1 ಪ್ರಕರಣಗಳು ಮತ್ತು ನವೆಂಬರ್‍ನಲ್ಲಿ 16 ಜೆಎನ್-1 ಪ್ರಕರಣಗಳು ವರದಿಯಾಗಿವೆ.