ನವದೆಹಲಿ: ಮೂರು ರಾಜ್ಯಗಳಲ್ಲಿ ಕೋವಿಡ್ ಹೊಸ ತಳಿ ಜೆಎನ್.1 ಪತ್ತೆಯಾಗಿದೆ. ಗೋವಾದಲ್ಲಿ 18, ಕೇರಳ ಮತ್ತು ಕರ್ನಾಟಕದಲ್ಲಿ ತಲಾ ಒಂದು ಹೊಸ ಪ್ರಕರಣ ಸೇರಿ ಒಟ್ಟು 20 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು INSACOG (ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ) ಅಂಕಿ ಅಂಶ ತಿಳಿಸಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈಗಾಗಲೇ ಕೇಂದ್ರ ಸರ್ಕಾರ ನಿರಂತರವಾಗಿ ಎಚ್ಚರಿಕೆಯಿಂದಿರಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.
ದೇಶದಲ್ಲಿ ಇಂದು ಹೊಸದಾಗಿ 614 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,311ಕ್ಕೆ ಏರಿಕೆಯಾಗಿದೆ. ಮೇ 21 ರಿಂದ ಈವರೆಗೆ ದೃಢಪಟ್ಟ ಅತಿ ಹೆಚ್ಚು ದೈನಂದಿನ ಪ್ರಕರಣ ಇದಾಗಿದೆ.
ಜೆಎನ್.1 ಸೋಂಕು ಹರಡುವಿಕೆ ವೇಗವಾಗಿದೆ, ಆದರೆ ಜಾಗತಿಕವಾಗಿ ಆರೋಗ್ಯದ ಮೇಲಿನ ಅಪಾಯ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ದೇಶದಲ್ಲಿ ಕೋವಿಡ್ ಗಣನೀಯ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯ ಅವರು ಇಂದು ಸಭೆ ನಡೆಸಿದ್ದು, ಜಾಗರೂಕರಾಗಿರುವಂತೆ ಜನತೆಗೆ ತಿಳಿಸಿದ್ದಾರೆ.