ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಯಾವುದೇ ಡಿವಿಷನ್ ಅಥವಾ ಡಿಸ್ಟಿಂಕ್ಷನ್ ನೀಡುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
"ಯಾವುದೇ ಒಟ್ಟಾರೆ ವಿಭಾಗ, ಡಿಸ್ಟಿಂಗ್ಷನ್ ಅಥವಾ ಅಂಕಗಳ ಒಟ್ಟು ಮೊತ್ತವನ್ನು ನೀಡಲಾಗುವುದಿಲ್ಲ. ಅಲ್ಲದೆ, ಅಭ್ಯರ್ಥಿಯು ಐದಕ್ಕಿಂತ ಹೆಚ್ಚು ವಿಷಯಗಳನ್ನು ತೆಗೆದುಕೊಂಡಿದ್ದರೆ, ಅದರಲ್ಲಿ ಅತ್ಯುತ್ತಮ ಐದು ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ಸಂಸ್ಥೆ ಅಥವಾ ಉದ್ಯೋಗದಾತರಿಗೆ ನೀಡಲಾಗಿದೆ" ಎಂದು CBSE ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ಅವರು ಹೇಳಿದ್ದಾರೆ.
ಮಂಡಳಿಯು ಶೇಕಡಾವಾರು ಅಂಕಗಳನ್ನು ಲೆಕ್ಕ ಹಾಕುವುದಿಲ್ಲ, ಘೋಷಿಸುವುದಿಲ್ಲ ಅಥವಾ ತಿಳಿಸುವುದಿಲ್ಲ ಎಂದು ಭಾರದ್ವಾಜ್ ಅವರು ಹೇಳಿದ್ದಾರೆ.
"ಉನ್ನತ ಶಿಕ್ಷಣ ಅಥವಾ ಉದ್ಯೋಗದಲ್ಲಿ ಶೇಕಡಾವಾರು ಅಂಕಗಳ ಅಗತ್ಯವಿದ್ದರೆ, ಆಯಾ ಶಿಕ್ಷಣ ಸಂಸ್ಥೆ ಅಥವಾ ಉದ್ಯೋಗದಾತರು ಲೆಕ್ಕಹಾಕಬಹುದು" ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ, ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು CBSE ಮೆರಿಟ್ ಪಟ್ಟಿಗಳನ್ನು ಪ್ರಕಟಿಸುವ ವ್ಯವಸ್ಥೆಯನ್ನು ಸಹ ತೆಗೆದುಹಾಕಿದೆ.