ಕಾಸರಗೋಡು: ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾದ 100ನೇ ವಾರ್ಷಿಕ ಘೋಷಣಾ ಸಮ್ಮೇಳನ ಡಿ. 30ರಂದು ಸಂಜೆ 4 ಗಂಟೆಗೆ ಚಟ್ಟಂಚಾಲ್‍ನ ಮಾಲಿಕ್‍ದೀನಾರ್ ನಗರದಲ್ಲಿ ನಡೆಯಲಿದೆ. ಸಮಸ್ತದ ನಲವತ್ತು ಕೇಂದ್ರ ಮುಶಾವರಂಗಳ ಹೊರತಾಗಿ ಪ್ರಮುಖ ವಾಗ್ಮಿಗಳು, ಪಂಡಿತರು ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭ ಉಪನ್ಯಾಸ, ಪ್ರಬಂಧ ಪ್ರಸ್ತುತಿ ಮತ್ತು ಸಮಸ್ತ ಕೇರಳ ಜಮೀಯ್ಯತುಲ್ ಉಲೇಮಾದ 100ನೇ ವಾರ್ಷಿಕ ಘೋಷಣಾ ಸಮಾವೇಶ ನಡೆಯಲಿದೆ.
ರಾಜ್ಯ ಮಟ್ಟದ ಹತ್ತು ಸಾವಿರ ಚುನಾಯಿತ ಪ್ರತಿನಿಧಿಗಳು ಸೇರಿದಂತೆ ಐವತ್ತು ಸಾವಿರಕ್ಕೂ ಹೆಚ್ಚುಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಚಟ್ಟಂಚಾಲ್‍ನ ಮಾಲಿಕ್‍ದೀನಾರ್ ನಗರದಲ್ಲಿ ಎಂಟು ಎಕರೆ ಪ್ರದೇಶದಲ್ಲಿ ವಿಶೇಷ ಸವಲತ್ತುಗಳೊಂದಿಗೆ ಸಜ್ಜುಗೊಳಿಸಲಾz ನಗರದಲ್ಲಿ ಸಮಾವೇಶ ನಡೆಯಲಿರುವುದು. ನಗರದಲ್ಲಿ ಪುಸ್ತಕ ಪ್ರದರ್ಶನ, ವಸ್ತುಪ್ರದರ್ಶನ, ವೈದ್ಯಕೀಯ ಪೆವಿಲಿಯನ್ ಸಿದ್ಧಪಡಿಸಲಾಗಿದೆ. ಮುಖ್ಯ ದ್ವಾರವು ಮಲಿಕ್ ದಿನಾರ್‍ನ ಹಳೆಯ ಜುಮುಅತ್ ಮಸೀದಿಯ ಮಾದರಿಯಲ್ಲಿರಲಿದೆ. ಸಮಸ್ತದ 100ನೇ ವರ್ಷಾಚರಣೆಯ ಅಂಗವಾಗಿ ಶಿಕ್ಷಣ, ವೃತ್ತಿ ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಗುಣಮಟ್ಟ ಮತ್ತು ಸ್ವಾವಲಂಬನೆ ಹೆಚ್ಚಿಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಆರಂಭಿಸಲಾಗುವುದು.
ಡಿ. 29ರಂದು ಮಧ್ಯಾಹ್ನ 2.30ಕ್ಕೆ ತಳಂಗರ ಮಲಿಕ್ ದಿನಾರ್‍ನಿಂದ ಧ್ವಜ ಮೆರವಣಿಗೆ ನಡೆಯಲಿದೆ. 29 ಡಿಸೆಂಬರ್ 1963 ರಂದು ತಳಂಗರದಲ್ಲಿ ನಡೆದ ಸಮಸ್ತ ಸಮ್ಮೇಳನದಲ್ಲಿ ಸಮಸ್ತ ಧ್ವಜವನ್ನು ಅಂಗೀಕರಿಸಲಾಗಿದ್ದು, ಧ್ವಜದ 60ನೇ ವಾರ್ಷಿಕೋತ್ಸವದಂದೇ ತಲಾ 100 ವಿದ್ವಾಂಸರು, ಯುವಕರು ಮತ್ತು ವಿದ್ಯಾರ್ಥಿಗಳ ಧ್ವಜ ಮೆರವಣಿಗೆಯು ತಳಂಗರೆಯಿಂದ ಚಟ್ಟಂಚಾಲ್ ಮಲಿಕ್ ದಿನಾರ್ ನಗರದವರೆಗೆ ನಡೆಯಲಿದೆ. ಸಂಜೆ 4.15ಕ್ಕೆ ನಡೆಯುವ ಸಾಂಸ್ಕøತಿಕ ಸಮ್ಮೇಳನವನ್ನು ಕರ್ನಾಟಕ ವಿಧಾನಸಭಾ ಸಭಾಪತಿ ಯು.ಟಿ.ಖಾದರ್. ಸಂಸದ ರಾಜಮೋಹನ್ ಉನ್ನಿಥಾನ್, ಜಿಲ್ಲೆಯ ಶಾಸಕರು ಪಾಲ್ಗೊಳ್ಳುವರು. 30ರ ಶನಿವಾರ ಸಂಜೆ 4 ಗಂಟೆಗೆ ಸಮ್ಮೇಳನ ಆರಂಭಗೊಂಡು ರಾತ್ರಿ 10 ಗಂಟೆಗೆ ಮುಕ್ತಾಯಗೊಳ್ಳಲಿದೆ.