ಬದಿಯಡ್ಕ : ರೋಟರಿ ಕ್ಲಬ್ ಬದಿಯಡ್ಕ ಇವರ ಸಹಯೋಗದಲ್ಲಿ ಡಿ. 10 ರಂದು ವಳಮಲೆ ಇರಾ ಸಭಾಂಗಣದಲ್ಲಿ ಉಚಿತ ಬಂಜೆತನ ಪರೀಕ್ಷೆ ಹಾಗೂ ಮಾಹಿತಿ ಶಿಬಿರ ಬೆಳಿಗ್ಗೆ 10 ರಿಂದ ಅಪರಾಹ್ನ 2:ರ ವರೆಗೆ ಜರಗಲಿದೆ. ನೋವಾ ಐವಿಎಫ್ ಫರ್ಟಿಲಿಟಿ ಮಂಗಳೂರು, ಇಲ್ಲಿನ ತಜ್ಞವೈದ್ಯೆ ಡಾ. ಶವೀಝ್ ಫೈಝಿರವರು ಈ ಮಾಹಿತಿ ಶಿಬಿರ ನಡೆಸುವರು. ಬಂಜೆತನ ಎನ್ನುವುದು ಚಿಕಿತ್ಸೆ ನೀಡಬಹುದಾಗಿದ್ದು, ಬಂಜೆತನ ತಜ್ಞರೊಂದಿಗೆ ಫಲಾನುಭವಿಗಳು ಉಚಿತ ಸಮಾಲೋಚನೆ ಮಾಡಬಹುದಾಗಿದೆ. ಬಂಜೆತನ ಸಮಸ್ಯೆಗಳನ್ನು ಎದುರಿಸುವವರು ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.