ನವದೆಹಲಿ: ತಮಿಳುನಾಡು, ತೆಲಂಗಾಣ ಸೇರಿ 10 ರಾಜ್ಯಗಳು ತಮ್ಮ ಆಡಳಿತವ್ಯಾಪ್ತಿಯಲ್ಲಿ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ಹಿಂಪಡೆದಿವೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಯಿತು.
ನವದೆಹಲಿ: ತಮಿಳುನಾಡು, ತೆಲಂಗಾಣ ಸೇರಿ 10 ರಾಜ್ಯಗಳು ತಮ್ಮ ಆಡಳಿತವ್ಯಾಪ್ತಿಯಲ್ಲಿ ಪ್ರಕರಣಗಳ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಸಮ್ಮತಿಯನ್ನು ಹಿಂಪಡೆದಿವೆ ಎಂದು ಲೋಕಸಭೆಗೆ ಬುಧವಾರ ತಿಳಿಸಲಾಯಿತು.
ಸಂಬಂಧಪಟ್ಟ ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿ ತನಿಖೆ ಕೈಗೊಳ್ಳಲು ಆ ರಾಜ್ಯದ ಒಪ್ಪಿಗೆಯನ್ನು ಸಿಬಿಐ ಪಡೆದಿರಬೇಕು ಎಂದು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‌ಪಿಇ) ಕಾಯ್ದೆ- 1946ರ ಸೆಕ್ಷನ್-6ರ ಅಡಿ ಹೇಳಲಾಗಿದೆ.
ಪಂಜಾಬ್, ಜಾರ್ಖಂಡ್, ಕೇರಳ, ರಾಜಸ್ಥಾನ, ಛತ್ತೀಸಗಢ, ಪಶ್ಚಿಮ ಬಂಗಾಳ, ಮಿಜೋರಾಂ, ತೆಲಂಗಾಣ, ಮೇಘಾಲಯ ಮತ್ತು ತಮಿಳುನಾಡು ರಾಜ್ಯಗಳು ಒಪ್ಪಿಗೆಯನ್ನು ಹಿಂಪಡೆದಿವೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜೀತೇಂದ್ರ ಸಿಂಗ್ ಅವರು ಲಿಖಿತ ರೂಪದಲ್ಲಿ ಉತ್ತರಿಸಿದರು.
ಸೆಕ್ಷನ್-6ಕ್ಕೆ ತಿದ್ದುಪಡಿ ತರುವ ಪ್ರಸ್ತಾವ ಕೇಂದ್ರ ಸರ್ಕಾರಕ್ಕೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ಅವರು 'ಇಲ್ಲ' ಎಂದು ಉತ್ತರಿಸಿದರು.