ತ್ರಿಶೂರ್: ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ ದೂರುದಾರರಿಗೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ತ್ರಿಶೂರ್ ಮೂಲದ ಮನಶಾಸ್ತ್ರಜ್ಞ ಪ್ರಸಾದ್ ಎಂಕೆ ಅವರ ದೂರಿನ ಆಧಾರದ ಮೇಲೆ ಈ ತೀರ್ಪು ನೀಡಲಾಗಿದೆ. ತ್ರಿಶೂರ್ ಹೆಚ್ಚುವರಿ ಸಬ್ ಕೋರ್ಟ್ ಆದೇಶ ನೀಡಿದೆ.
ಕೊಟ್ಟಾಯಂ ಮೂಲದ ಶೆರಿನ್ ವಿ ಜಾರ್ಜ್ ಅವರು ಪ್ರಸಾದ್ ವಿರುದ್ಧ ಮಾನಹಾನಿ ಪೋಸ್ಟ್ ಮಾಡಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶಿಸಿದೆ. ಏಪ್ರಿಲ್ 26, 2017 ರಂದು, ದೂರುದಾರರಾದ ಪ್ರಸಾದ್ ಅವರ ಪ್ರಮಾಣಪತ್ರಗಳು ನಕಲಿ ಎಂದು ಶೆರಿನ್ ಪೋಸ್ಟ್ ಅನ್ನು ಪೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದರು.
ಇದರಿಂದ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮೂಡಿ ಹಲವು ಗ್ರಾಹಕರನ್ನು ಕಳೆದುಕೊಂಡು ಆರ್ಥಿಕ ನಷ್ಟ ಉಂಟಾಗಿದೆ ಎಂದು ದೂರಿದರು. 10 ಲಕ್ಷ ರೂ, 2017ರಿಂದ ಶೇ 6ರಷ್ಟು ಬಡ್ಡಿ ಹಾಗೂ ನ್ಯಾಯಾಲಯದ ವೆಚ್ಚ ಭರಿಸುವಂತೆ ಆದೇಶ ಹೊರಡಿಸಲಾಗಿದೆ.