ಕಾಸರಗೋಡು: ಜಿಲ್ಲಾ ಪೆÇಲೀಸ್ ಇಲಾಖೆಯಲ್ಲಿ ಪೆÇಲೀಸ್ ಕಾನ್ಸ್‍ಟೇಬಲ್ (ಐ.ಆರ್.ಬಿ ಕಮಾಂಡೋ ವಿಂಗ್-ಕಾಟಗರಿ ನಂಬರ್ 136 / 2022) ಹುದ್ದೆಗೆ ಆಯ್ಕೆ ಮಾಡಲು ಕ್ರೀಡಾ ಸಾಮಥ್ರ್ಯ ಪರೀಕ್ಷೆ ಡಿ. 11 ರಿಂದ 15 ರವರೆಗೆ ಬೆಳಿಗ್ಗೆ 5 ರಿಂದ ಕಾಸರಗೋಡು ಅಡ್ಕತ್ತಬೈಲ್ ಜಿ.ಯು.ಪಿ ಶಾಲೆಯ ಸಮೀಪದ ತಾಳಿಪಡ್ಪು ಮೈದಾನದಲ್ಲಿ ನಡೆಯಲಿರುವುದು.
ಅಭ್ಯರ್ಥಿಗಳು ಅಡ್ಮಿಷನ್ ಟಿಕೆಟ್, ಮೆಡಿಕಲ್ ಸರ್ಟಿಫಿಕೇಟ್, ಗುರುತಿನ ಚೀಟಿಯೊಂದಿಗೆ ನಿಗದಿಪಡಿಸಿದ ದಿನಾಂಕದಂದು ಆಗಮಿಸಬೇಕೆಂದು ಕೇರಳ ಲೋಕಸೇವಾ ಆಯೋಗದ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದೂರವಾಣಿ ಸಂಖ್ಯೆ(04994 230102)