ಶಬರಿಮಲೆ: ಪೆÇನ್ನಂಬಲವಾಸನ ದರ್ಶನ ಪಡೆಯಲು ಶಬರೀಶನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ನಿನ್ನೆಯμÉ್ಟೀ 1 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಶಬರಿಮಲೆ ತಲುಪಿದ್ದಾರೆ. ಭಕ್ತರ ದಂಡು ಹರಿದು ಬರುತ್ತಿದ್ದಂತೆ ನಿಲಕ್ಕಲ್‍ನಿಂದ ಯಾತ್ರಾರ್ಥಿಗಳನ್ನು ನಿಯಂತ್ರಿಸಲಾಯಿತು.
ಸದ್ಯ ನಿಲಯ್ಕಲ್, ಪಂಬಾ, ನಿಲಿಮಲ, ಶಬರಿಪೀಠ, ಸರಂಕುತ್ತಿ ಮೊದಲಾದೆಡೆ ಶರಣ ಪಥದುದ್ದಕ್ಕೂ ಭಕ್ತರನ್ನು ಪೋಲೀಸರು ನಿಯಂತ್ರಿಸುತ್ತಿದ್ದಾರೆ. ಸಹಸ್ರಾರು ಭಕ್ತರು 12 ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ಕಾಲ್ನಡಿಗೆಯ ಮೂಲಕ ಪಾರಂಪರಿಕ ವನದ ಮೂಲಕವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಶಬರಿಮಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರಬಹುದು ಎಂದು ಪೋಲೀಸರು ನಿರೀಕ್ಷಿಸಿದ್ದಾರೆ.