ಕಾಸರಗೋಡು : 2023-24ನೇ ವರ್ಷದ ಅಖಿಲ ಭಾರತ ಸಿವಿಲ್ ಸರ್ವೀಸ್ ಸೆಲೆಕ್ಷನ್ ಟೂರ್ನಮೆಂಟಿನಲ್ಲಿ ಶಟಲ್ ಬ್ಯಾಡ್ಮಿಂಟನ್ (ಡಿಸೆಂಬರ್ 14, ವಿ.ಕೆ.ಎನ್ ಮೇನೊನ್ ಇಂಡೋರ್ ಸ್ಟೇಡಿಯಂ ತ್ರಿಶೂರ್), ಬೆಸ್ಟ್ ಫಿಸಿಕ್ (ಡಿಸೆಂಬರ್ 15, ಅಕ್ವಾಟಿಕ್ ಕಾಂಪ್ಲೆಕ್ಸ್ ತ್ರಿಶೂರ್) ಮತ್ತು ವೇಟ್‍ಲಿಫ್ಟಿಂಗ್ (ಡಿಸೆಂಬರ್ 16, ಅಕ್ವಾಟಿಕ್ ಕಾಂಪ್ಲೆಕ್ಸ್ ತ್ರಿಶೂರ್) ಎಂಬೀ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ರಾಜ್ಯ ತಂಡಗಳನ್ನು ಆಯ್ಕೆ ಮಾಡಲು ರಾಜ್ಯ ಸಿವಿಲ್ ಸರ್ವೀಸ್ ಸೆಲೆಕ್ಷನ್ ಟ್ರೈಯಲ್ಸ್ ತ್ರಿಶೂರ್ ಜಿಲ್ಲಾ ಸ್ಪೋಟ್ರ್ಸ್ ಕೌನ್ಸಿಲ್ ಆಶ್ರಯದಲ್ಲಿ ನಡೆಸಲಾಗುತ್ತದೆ. ಸೆಲೆಕ್ಷನ್ ಟ್ರಯಲ್ಸ್‍ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಕ್ರೀಡಾಪಟುಗಳು ತಮ್ಮ ಮೇಲಧಿಕಾರಿಗಳಿಂದ ದೃಢೀಕರಿಸಿದ ಮೂಲ ಅರ್ಹತಾ ಪ್ರಮಾಣಪತ್ರಗಳೊಂದಿಗೆ ಸ್ಪರ್ಧೆಯ ದಿನದಂದು ಬೆಳಿಗ್ಗೆ 8 ಗಂಟೆಗೆ ಆಯಾ ಕ್ರೀಡಾಂಗಣಕ್ಕೆ ತಲುಪಬೇಕು. ಕ್ರೀಡಾಪಟುಗಳು ಸ್ಪೋಟ್ರ್ಸ್ ಕಿಟ್ ಮತ್ತು ನೋಂದಣಿ ಶುಲ್ಕವಾಗಿ 100 ರೂಪಾಯಿಗಳನ್ನು ತರುವಂತೆ ಪ್ರಕಟಣೆ ತಿಳಿಸಿದೆ.