ಎರ್ನಾಕುಳಂ: ಸಾಲ ವಂಚನೆ ಪ್ರಕರಣದಲ್ಲಿ ಹೀರಾ ಗ್ರೂಪ್ ಎಂಡಿ ಅಬ್ದುಲ್ ರಶೀದ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಎಸ್.ಬಿ.ಐ.ನಿಂದ 14 ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಇಡಿ ಅವರ ಬಂಧನವನ್ನು ದಾಖಲಿಸಿದೆ.
ಅಬ್ದುಲ್ ರಶೀದ್ ಅವರನ್ನು ಕೊಚ್ಚಿಗೆ ಕರೆಸಿ ಇಡಿ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಬಂಧನ ನಡೆದಿದೆ. ಇಡಿ ಹೀರಾ ಗ್ರೂಪ್‍ನ ಕಚೇರಿಗಳು ಮತ್ತು ಇತರ ಸಂಸ್ಥೆಗಳಲ್ಲಿ ಶೋಧ ನಡೆಸಿತ್ತು. ಸಾಲ ಪಡೆದು ಬ್ಯಾಂಕ್‍ಗೆ ವಂಚಿಸಿದ ಪ್ರಕರಣ ಅವರ ವಿರುದ್ಧ ಇದೆ. ಎಸ್‍ಬಿಐ ಅಲ್ಲದೆ ಇನ್ನೂ ಕೆಲವರು ಅಬ್ದುಲ್ ರಶೀದ್ ವಿರುದ್ಧ ದೂರು ದಾಖಲಿಸಿದ್ದಾರೆ.
ಅಬ್ದುಲ್ ರಶೀದ್ ಅವರು ಅಕ್ಕುಳಂನಲ್ಲಿ ಫ್ಲಾಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾಲ ಪಡೆದಿದ್ದರು. ಆದರೆ ಫ್ಲಾಟ್‍ಗಳನ್ನು ಮಾರಾಟ ಮಾಡಿದರೂ ಸಾಲ ಮರುಪಾವತಿ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಪೆÇಲೀಸರು ಮತ್ತು ಸಿಬಿಐ ಪ್ರಕರಣದ ತನಿಖೆ ನಡೆಸಿದ್ದವು.