ತಿರುವನಂತಪುರಂ: ರಾಜ್ಯದಲ್ಲಿ ಕ್ರಿಸ್‍ಮಸ್ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಜೋರಾಗಿದ್ದು, ನಿನ್ನೆಯೊಂದೇ ದಿನ 70.73 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ತಿಳಿದುಬಂದಿದೆ.
ಮೂರು ದಿನಗಳಲ್ಲಿ ಬೆಪ್ಕೋ ಮಳಿಗೆಗಳ ಮೂಲಕ 154.77 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಕ್ರಿಸ್‍ಮಸ್ ಹಬ್ಬದ ಮುನ್ನಾದಿನ 69.55 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು.
ಚಾಲಕುಡಿಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾಗಿದೆ. ನಿನ್ನೆ ಇಲ್ಲಿ 63,85,290 ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಚಂಗನಾಶ್ಶೇರಿಯಲ್ಲಿ ರೂ.62,87,120, ಇರಿಂಞಲಕುಡದಲ್ಲಿ ರೂ.62,31,140, ಪವರ್‍ಹೌಸ್ ರೂ.60,08,130 ಮತ್ತು ಉತ್ತರ ಪರವೂರು ರೂ.51,99,570 ಮೌಲ್ಯದ ಮದ್ಯ ಮಾರಾಟವಾಗಿದೆ. ಬೆಪ್ಕೋ ಈ ಬಾರಿ ಮದ್ಯ ಮಾರಾಟದಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಿದೆ.