ತಿರುವನಂತಪುರಂ: ರಾಜ್ಯದಲ್ಲಿ ಕ್ರಿಸ್‍ಮಸ್ ಆಚರಣೆ ದಿನವಾದ ಮೊನ್ನೆ ದಾಖಲೆಯ ಮದ್ಯ ಮಾರಾಟವಾಗಿದೆ. ಗೋದಾಮು ಮಾರಾಟ ಸೇರಿದಂತೆ ಮೂರು ದಿನಗಳಲ್ಲಿ ರಾಜ್ಯದಲ್ಲಿ ಒಟ್ಟು ಮಾರಾಟ 230.47 ಕೋಟಿ ರೂ.ದಾಖಲಾಗಿದೆ.
ಸೋಮವಾರ 70.73 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 69.55 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು.
ಈ ಬಾರಿ ಡಿ. 22 ಮತ್ತು ಡಿ.23ರಂದು 84.04 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಇದೇ ವೇಳೆ ಕಳೆದ ವರ್ಷ 75.41 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿತ್ತು. ಅಂಕಿಅಂಶಗಳ ಪ್ರಕಾರ ಪ್ರಸ್ತುತ ಚಾಲಕುಡಿಯ ಮಳಿಗೆಯಲ್ಲಿ ಅತಿ ಹೆಚ್ಚು ಮದ್ಯ ಮಾರಾಟ ನಡೆದಿದೆ. ಎರಡನೇ ಸ್ಥಾನ ಚಂಗನಾಶ್ಶೇರಿಗೆ ಸೇರಿದೆ.