ಮುಳ್ಳೇರಿಯ: ಬೋವಿಕ್ಕಾನ ಸರಸ್ವತಿ ವಿದ್ಯಾಲಯದ ವಿದ್ಯಾಭಾರತಿ ಪ್ರಾದೇಶಿಕ ಕಲಾ ಉತ್ಸವ ಮತ್ತು ಸರಸ್ವತಿ ವಿದ್ಯಾಲಯದ 15 ನೇ ವಾರ್ಷಿಕೋತ್ಸವ ಬೋವಿಕಾನ ಸರಸ್ವತಿ ವಿದ್ಯಾಲಯದಲಿಗುರುವಾರ ಆರಂಭಗೊಂಡಿತು. ವಾರ್ಷಿಕೋತ್ಸವ ಸಮಾರಂಭ ಡಿ. 24ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮದ ಪೂರ್ವಭಾವಿಯಾಗಿ ವಿದ್ಯಾಲಯ ಸಮಿತಿ ಮಾತೃ ಸಮಿತಿ ಕ್ಷೇಮ ಸಮಿತಿ ನೇತೃತ್ವದಲ್ಲಿ ನಡೆದ ಮೆರವಣಿಗೆಗೆ ವಿದ್ಯಾಲಯ ಸಮಿತಿ ಅಧ್ಯಕ್ಷ ಮೋಹನನ್ ಬಿ, ಉಪಾಧ್ಯಕ್ಷ ನಾರಾಯಣನ್ ಪಾಲತೋಡಿ, ರಮಣನ್ ಚಿಪ್ಲಿಕಯ, ಸದಾಶಿವನ್ ಮಾಸ್ಟರ್, ಶಶಿ ತೇಜಸ್ ಕಾಲೋನಿ, ಅನಿಲ್ ಮುಂಡಕೈ, ಬಾಲನ್ ಮುಂಡಕೈ, ಶಾಲಿನಿ ಬಾಲನ್, ಚಾತುಕುಟ್ಟಿ ಮಾತಾರ್ ನೇತೃತ್ವ ನೀಡಿದರು.
23ರಂದು ಬೆಳಗ್ಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳು ಶಾಲಾ ಕಲೋತ್ಸವ ಉದ್ಘಾಟಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಕಲಾ-ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. ರಾತ್ರಿ 8ಕ್ಕೆ ಮೆಗಾ ಶೋದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.