ತಿರುವನಂತಪುರಂ: ಕೇರಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ ಆರ್ಟ್‍ಸೈನ್ಸ್‍ನ ಅಡಿಯಲ್ಲಿ ವಿಜ್ಞಾನ ತಂತ್ರಜ್ಞಾನ ಪರಿಸರ ಮಂಡಳಿಯು ಆಯೋಜಿಸಿರುವ ಜಾಗತಿಕ ವಿಜ್ಞಾನ ಉತ್ಸವವು ಜನವರಿ 15 ರಿಂದ ಫೆಬ್ರವರಿ 15 ರವರೆಗೆ ಬಯೋ ಲೈಫ್ ಸೈನ್ಸಸ್ ಪಾರ್ಕ್‍ನಲ್ಲಿ ನಡೆಯಲಿದೆ.
15 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 2.5 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿರುವ ಈ ವಿಜ್ಞಾನ ವಸ್ತುಪ್ರದರ್ಶನವು ಏμÁ್ಯದಲ್ಲಿಯೇ ಅತಿ ದೊಡ್ಡ ಮತ್ತು ಮೊದಲನೆಯದು ಎಂದೇ ವ್ಯಾಖ್ಯಾನಿಸಲಾಗಿಲೆ. 25 ಎಕರೆ ಜಾಗದಲ್ಲಿ ಉತ್ಸವ ಸಂಕೀರ್ಣ ಸಿದ್ಧಗೊಳ್ಳುತ್ತಿದೆ. ಕೇರಳ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತುಸಂಗ್ರಹಾಲಯದ ಸಹಯೋಗದಲ್ಲಿ ರಾತ್ರಿ ಆಕಾಶ ವೀಕ್ಷಣೆ ಸೇರಿದಂತೆ ಕಾರ್ಯಕ್ರಮಗಳಿವೆ.
ಜರ್ಮನ್ ಕಾನ್ಸುಲೇಟ್‍ನ ಎನರ್ಜಿ ಟ್ರಾನ್ಸಿಶನ್, ವಾಟರ್ ಮ್ಯಾಟರ್ಸ್ ಅನ್ನು ಪೆಸಿಫಿಕ್ ವಲ್ಡ್ರ್ಸ್ ಇನ್‍ಸ್ಟಿಟ್ಯೂಟ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಡೌಗ್ಲಾಸ್ ಹರ್ಮನ್, ಬ್ರಿಟೀಷ್ ಇನ್‍ಸ್ಟಾಲೇಶನ್ ಆರ್ಟಿಸ್ಟ್ ಲ್ಯೂಕ್ ಜೆರ್ರಾಮ್‍ರಿಂದ ಕ್ಲೈಮೇಟ್-ನಿಯಂತ್ರಿತ ಸ್ಥಾಪನೆ ಮತ್ತು ಮೆಲ್ಬೋರ್ನ್‍ನಲ್ಲಿರುವ ವಿಶ್ವ-ಪ್ರಸಿದ್ಧ ಮೂನ್ ಮತ್ತು ಮಾರ್ಸ್ ಮ್ಯೂಸಿಯಂ, ನೈಜ ಮಾದರಿಗಳನ್ನು ಒಳಗೊಂಡಿದೆ. ಮಾಲಿಕ್ಯುಲರ್ ಆನಿಮೇಟರ್ ಡ್ರೂ ಬೆರ್ರಿ ಅವರಿಂದ ಚಂದ್ರ ಮತ್ತು ಮಂಗಳ ಮಾಲಿಕ್ಯೂಲರ್ ಅನಿಮೇಷನ್, ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂನಿಂದ ಸಂಸ್ಕøತಿಯ ಬೀಜಗಳು, ವಿವಿಧ ರಾಷ್ಟ್ರೀಯ ವಿಜ್ಞಾನ ಸಂಸ್ಥೆಗಳಿಂದ ಪ್ರದರ್ಶನಗಳು ಇತ್ಯಾದಿಗಳು ಉತ್ಸವದ ಭಾಗವಾಗಿರುತ್ತವೆ.