ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಆಶ್ರಯದಲ್ಲಿ ಉದ್ಯೋಗಾರ್ಹತಾ ಕೇಂದ್ರವು ಡಿಸೆಂಬರ್ 14, 15 ಮತ್ತು 16 ರಂದು ಕಮ್ಯೂನಿಕೇಟಿವ್ ಇಂಗ್ಲಿಷ್, ಕಂಪ್ಯೂಟರ್ ತರಬೇತಿ ಮತ್ತು ಸಾಫ್ಟ್ ಸ್ಕಿಲ್ಸ್ ಕುರಿತು ಉಚಿತ ತರಗತಿಗಳನ್ನು ಆಯೋಜಿಸುತ್ತಿದೆ.
ಭಾಗವಹಿಸಲು ಆಸಕ್ತಿಹೊಂದಿರುವವರು ತಮ್ಮ ಹೆಸರನ್ನು ಉದ್ಯೋಗ ಕೇಂದ್ರದಲ್ಲಿ ಮುಮಚಿತವಾಗಿ ನೋಂದಾಯಿಸಬೇಕು. ಎಲ್ಲಾ ನೋಂದಣಿದಾರರು ಮೂರು ದಿನಗಳ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಉದ್ಯೋಗ ಕೇಂದ್ರದಲ್ಲಿ ಒಂದು ಬಾರಿ ನೋಂದಣಿ ಶುಲ್ಕ 250 ರೂ. ಆಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ(9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.