HEALTH TIPS

ನವ ಕೇರಳ ಸಮಾವೇಶದಲ್ಲಿ ಬಂದ ಮನವಿ: ಎರಿಂಚೇರಿ ಆಯುರ್ವೇದ ದವಾಖಾನೆಗೆ 17 ಸೆಂಟ್ ಕಂದಾಯ ಭೂಮಿ ಮಂಜೂರು

             ಮುಳ್ಳೇರಿಯ: ಮುಳಿಯಾರು ಗ್ರಾಮ ಪಂಚಾಯಿತಿಯ ಆರನೇ ವಾರ್ಡ್ ಎರಿಂಚೇರಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುರ್ವೇದ ದವಾಖಾನೆ ಶೀಘ್ರ ಸ್ವಂತ ಕಟ್ಟಡ ಹೊಂದಲಿದೆ. ಮುಳಿಯಾರು ಗ್ರಾಮದ ಸರ್ವೆ ನಂಬರ್ 779/2ರ 0.0648 ಸೆಂಟ್ಸ್ ಕಂದಾಯ ಭೂಮಿಯನ್ನು ಕಟ್ಟಡ ನಿರ್ಮಿಸಲು ಹಸ್ತಾಂತರಿಸಲು ಜಿಲ್ಲಾಧಿಕಾರಿ ಆದೇಶಿಸಿರುವÀರು.

              ಒಂಬತ್ತು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ದವಾಖಾನೆ ಕಾರ್ಯನಿರ್ವಹಿಸುತ್ತಿದೆ. ಸ್ವಂತ ನಿವೇಶನಕ್ಕೆ ಈ ಹಿಂದೆಯೇ ಮನವಿ ಮಾಡಲಾಗಿತ್ತು ಆದರೆ ಯಾವುದೇ ಫಲಿತಾಂಶ ಲಭಿಸಿರಲಿಲ್ಲ. ಉದುಮ ಮಂಡಲದ ಚಟ್ಟಂಚಾಲಲ್ಲಿ ನ.19ರಂದು ಆಯೋಜಿಸಿದ್ದ ನವಕೇರಳ ಸಮಾವೇಶದಲ್ಲಿ ನೀಡಿದ ಮನವಿಯ ಮೇರೆಗೆ ಕೆಲವೇ ದಿನಗಳಲ್ಲಿ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಆದೇಶ ನೀಡಲಾಗಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries