ಪೆರ್ಲ: ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತೀ, ದುರ್ಗಾವಾಹಿನಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಸತ್ಸಂಗ ಸಮಾವೇಶ ಡಿ. 17ರಂದು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ತಿ)ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದೆ.
ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಕಾರ್ಯಕ್ರಮ ನಡೆಯಲಿರುವುದು. ಹಿಂದೂ ಧರ್ಮದ ರಕ್ಷನೆ ನಮ್ಮ ಗುರಿ ಎಂಬ ಧ್ಯೇಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಹಿಂಪ ಕೇರಳ ರಾಜ್ಯ, ವಿಭಾಗ, ಜಿಲ್ಲಾ ಪ್ರಮುಖರು ಸತ್ಸಂಗ ಮಾರ್ಗದರ್ಶನ ನೀಡಲಿರುವುದಾಗಿ ಪ್ರಕಟಣೆ ತಿಳಿಸಿದೆ.