HEALTH TIPS

ಜ.2-3 : ಆರಿಕ್ಕಾಡಿಯಲ್ಲಿ ನಾಗ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ

            ಕುಂಬಳೆ: ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಕುಟುಂಬ ನಾಗಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಜನವರಿ 2 ಮತ್ತು 3 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 

            ಜ.2 ರಂದು ಅಪರಾಹ್ನ 2.30 ರಿಂದ ವಿವಿಧ ಸಂಘಸಂಸ್ಥೆಗಳಿಂದ ಭಜನೆ, 5 ರಿಂದ ತಂತ್ರಿವರೇಣ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಸ್ವಸ್ತೀ ಪುಣಾಹವಾಚನ, ಸ್ಥಳಶುದ್ಧಿ, ವಾಸ್ತು ಹೋಮ, ಪ್ರಕಾರ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಬಲಿ, ದಿಕ್ಪಾಲ ಬಲಿ, ನಾಗಬಿಂಬ ಅಧಿವಾಸ, ಕಲಶಾಧಿವಾಸ, ಅಧಿವಾಸ ಹೋಮ, ಜ.3 ರಂದು ಬೆಳಗ್ಗೆ 7 ಕ್ಕೆ ಗಣಪತಿ ಹೋಮ, ಪ್ರತಿಷ್ಠಾ ಹೋಮ, 8.37 ರಿಂದ 9.38 ರ ಮಧ್ಯ ಮಕರ ಲಗ್ನದಲ್ಲಿ ನಾಗಬಿಂಬ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, 10 ರಿಂದ ವಿವಿಧ ಸಂಘ ಸಂಸ್ಥೆಗಳಿಂದ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 1 ರಿಂದ ಅನ್ನಸಂತರ್ಪಣೆ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries