HEALTH TIPS

2022ರಲ್ಲಿ ಹೃದಯಾಘಾತಗಳ ಸಂಖ್ಯೆ 12 ರಷ್ಟು ಏರಿಕೆ: ಕೋವಿಡ್​​​​ ಪ್ರಭಾವ ಎಂದ ತಜ್ಞರು

                 ವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಹೃದಯಾಘಾತ ಪ್ರಕರಣಗಳ ಭಾರಿ ಏರಿಕೆಗೆ ಭಾರತ ಸಾಕ್ಷಿಯಾಗಿದ್ದು, ಈ ಅಪಾಯಕಾರಿ ಟ್ರೆಂಡ್​ಗೆ ಕೋವಿಡ್​ ಸಾಂಕ್ರಮಿಕ ಪ್ರಭಾವ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

                ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋ (ಎನ್​ಸಿಆರ್​ಬಿ)​ ಪ್ರಕಾರ 2022ರಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಶೇ. 12.5% ಹೆಚ್ಚಳವಾಗಿದೆ. ಭಾರತದಲ್ಲಿ ಆಕಸ್ಮಿಕ ಅಥವಾ ಅಪಘಾತದ ಸಾವುಗಳು ಮತ್ತು ಆತ್ಮಹತ್ಯೆಗಳ ಮೇಲಿನ ಎನ್‌ಸಿಆರ್‌ಬಿಯ ಇತ್ತೀಚಿನ ಮಾಹಿತಿಯು ಒಂದು ಕಠೋರ ಚಿತ್ರಣವನ್ನೇ ತೋರಿಸಿದ್ದು, 2022ರಲ್ಲಿ 32,457 ವ್ಯಕ್ತಿಗಳು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂದು ಸೂಚಿಸುತ್ತದೆ. ಈ ಸಂಖ್ಯೆ 2021ರಲ್ಲಿ ದಾಖಲಾದ 28,413 ಸಾವುಗಳಿಗಿಂತ ಗಮನಾರ್ಹ ಏರಿಕೆಯಾಗಿದೆ.

ಈ ಎಲ್ಲ ಅಂಕಿ-ಅಂಶಗಳನ್ನು ಹಠಾತ್ ಸಾವುಗಳ ಒಟ್ಟಾರೆ ಸಂಖ್ಯೆಗೆ ಸೇರಿಸಲಾಗಿದೆ. ಇದರ ಪ್ರಕಾರ 2022ರಲ್ಲಿ 56,450 ಮಂದಿ ಹಠಾತ್​ ಸಾವಿಗೀಡಾಗಿದ್ದಾರೆ. 2021ರ 50,739 ಸಂಖ್ಯೆಗೆ ಹೋಲಿಸಿದರೆ, ಶೇ. 10.1% ಹೆಚ್ಚಳವನ್ನು ಸೂಚಿಸುತ್ತದೆ. ಅಂದಹಾಗೆ ಎನ್‌ಸಿಆರ್‌ಬಿ ಪ್ರಕಾರ ಹಠಾತ್ ಮರಣವೆಂದರೆ, ಹಿಂಸಾಚಾರವನ್ನು ಹೊರತುಪಡಿಸಿ ಯಾವುದೇ ಕಾರಣದಿಂದ (ಉದಾಹರಣೆಗೆ, ಹೃದಯಾಘಾತ, ಮಿದುಳಿನ ರಕ್ತಸ್ರಾವ, ಇತ್ಯಾದಿ) ತತ್‌ಕ್ಷಣದ ಅಥವಾ ನಿಮಿಷಗಳಲ್ಲಿ ಸಂಭವಿಸುವ ಅನಿರೀಕ್ಷಿತ ಸಾವು ಎಂದು ಹೇಳಲಾಗಿದೆ.

                  2022ರಲ್ಲಿ 56,450 ಮಂದಿ ಹಠಾತ್​ ಸಾವಿಗೀಡಾಗಿದ್ದಾರೆ. ಇದಕ್ಕೂ ಹಿಂದಿನ ಮೂರು ವರ್ಷಗಳಿಗೆ ಹೋಲಿಕೆ ಮಾಡಿ ನೋಡಿದರೆ, ಈ ಅಂಕಿ-ಅಂಶಗಳು ನಿಜಕ್ಕೂ ಕಳವಳಕಾರಿಯಾಗಿದೆ. ಹೃದಯಾಘಾತದಂತಹ ನಿರ್ದಿಷ್ಟ ಕೆಟಗರಿಯಲ್ಲಿ ಆಘಾತಕಾರಿ ಏರಿಕೆ ಕಂಡಿದೆ. 2020ರಲ್ಲಿ 28,579 ಇದ್ದ ಸಾವಿನ ಸಂಖ್ಯೆ 2021ರಲ್ಲಿ 28,413ಕ್ಕೆ ಕುಸಿದಿತ್ತು. ಆದರೆ, 2022ರಲ್ಲಿ 32,457ಕ್ಕೆ ಏರಿಕೆಯಾಗಿರುವುದು ಕಳವಳಕಾರಿಯಾಗಿದೆ.

                 ಈ ಆಘಾತಕಾರಿ ಟ್ರೆಂಡ್​ಗೆ ಸಂಬಂಧಿಸಿದ ಅಂಶಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮತ್ತು ಪರಿಹಾರ ಹುಡುಕುವ ತುರ್ತುಸ್ಥಿತಿಯನ್ನು ಪ್ರಸ್ತುತ ಡೇಟಾ ಒತ್ತಿಹೇಳುತ್ತದೆ. ಹೃದಯದ ಆರೋಗ್ಯದ ಮೇಲಿನ ಸಾಂಕ್ರಮಿಕದ ಪ್ರಭಾವವನ್ನು ಸಹ ಇಲ್ಲಿ ನಿರ್ಲಕ್ಷಿಸಲಾಗದು. ಹೀಗಾಗಿ ಹೆಚ್ಚಿನ ಜಾಗೃತಿ, ತಡೆಗಟ್ಟುವ ಕ್ರಮಗಳು ಮತ್ತು ನಿಯಮಿತ ಆರೋಗ್ಯ ತಪಾಸಣೆಗಳ ಅಗತ್ಯವನ್ನು ತಜ್ಞರು ಒತ್ತಿಹೇಳಿದ್ದಾರೆ.

                 ಹಠಾತ್ ಹೃದಯಾಘಾತದ ಸಾವುಗಳು ಹೆಚ್ಚುತ್ತಿರುವುದನ್ನು ನಿಗ್ರಹಿಸಲು, ಜೀವನ ಶೈಲಿಯಲ್ಲಿ ಬದಲಾವಣೆಯ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಅಂದರೆ, ನಿಯಮಿತವಾಗಿ ವ್ಯಾಯಾಮ ಮಾಡುವುದು, ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಕಡಿಮೆ ಮಾಡುವುದು ಮತ್ತು ಪೌಷ್ಟಿಕಾಂಶದ ಆಹಾರವನ್ನು ಸೇವಿಸುವುದು ಮುಖ್ಯವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries