ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಕಾಸರಗೋಡಿನ ಕೊರಗ ಸಮಾಜ ಸಂಘಟನೆಗಾಗಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಡಿ.31 ರಂದು “ಕೊರಗ ಸಮಾಜ ಸಂಗಮ-2023” ಸಮಾರಂಭ ಆಯೋಜಿಸಲಾಗಿದೆ. ಉಪ್ಪಳದಿಂದ ಭವ್ಯ ಶೋಭಾಯಾತ್ರೆಯಲ್ಲಿ ಸಮಾಜ ಬಾಂಧವರು ಆಗಮಿಸಲಿದ್ದು ವಿವಿಧ ಸಮುದಾಯದ ಬಂಧುಗಳು ಅವರನ್ನು ಸ್ವಾಗತಿಸಲಿದ್ದಾರೆ. ಬೆ.10.30 ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಅವರು ಸಮಾವೇಶವನ್ನು ಉದ್ಘಾಟಿಸುವರು. ಕಟೀಲಿನ ವೇದಮೂರ್ತಿಅನಂತಪದ್ಮನಾಭ ಆಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಡಿ.ವೈ.ಎಸ್.ಪಿ ಸತೀಶ್ ಮತ್ತು ಟಿ.ಡಿ.ಒ. ಮಲ್ಲಿಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು, ಜಿಲ್ಲಾ ಎಸ್.ಸಿ.-ಎಸ್.ಟಿ ಮೋನಿಟರಿಂಗ್ ಸಮಿತಿ ಸದಸ್ಯರು ಮತ್ತು ನೇತಾರರು ಉಪಸ್ಥಿತರಿರುತ್ತಾರೆ. ಮಧ್ಯಾಹ್ನ ಕೊರಗ ಸಾಂಪ್ರದಾಯಿಕ ನೃತ್ಯದಂತಹ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 3.30 ರಿಂದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಕೊಂಡೆವೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಕಾಸರಗೋಡು ಜಿಲ್ಲಾಧಿಕಾರಿ ಇನ್ಬಾಶೇಕರ್, ರಾ.ಸ್ವ.ಸಂ.ನ ಕುಟುಂಬ ಪ್ರಬೋಧಿನಿ ರಾಷ್ಟ್ರೀಯ ಸಮಿತಿಯ ವಿಶೇಷ ಆಹ್ವಾನಿತರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮೈಸೂರಿನ ನ್ಯಾಯವಾದಿ ಒ..ಶ್ಯಾಮ್ ಭಟ್ ಮತ್ತು ಜೆ.ಎಸ್.ಎನ್.ಎಂ ಟ್ರಸ್ಟ್ ನ ವಿಶ್ವಸ್ಥ ಶಶಿಧರ ಶೆಟ್ಟಿ ಗ್ರಾಮಚಾವಡಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಕೊರಗ ಸಮಾಜ ಬಾಂಧವರು ಮಾತ್ರವಲ್ಲದೆ ಮುಖ್ಯವಾಹಿನಿಯ ಸಮಸ್ತರೂ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ನಡೆಯುವ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.