ಬೇಕಲ್ ಇಂಟರ್ನ್ಯಾಷನಲ್ ಬೀಚ್ ಫೆಸ್ಟ್ 2023 ಗೆ ಸಂಪೂರ್ಣ ಸಹಕಾರ ನೀಡಲಾಗುವುದು; ದಕ್ಷಿಣ ರೈಲ್ವೆ ಪಾಲಕ್ಕಾಡ್ ಡಿವಿಷನ್ ಮೇನೇಜರ್
0samarasasudhiಡಿಸೆಂಬರ್ 08, 2023
ಕಾಸರಗೋಡು : ಡಿಸೆಂಬರ್ 22ರಿಂದ 31ರವರೆಗೆ ನಡೆಯಲಿರುವ ಬೇಕಲ್ ಅಂತಾರಾಷ್ಟ್ರೀಯ ಬೀಚ್ ಫೆಸ್ಟಿವಲ್ ಎರಡನೇ ಆವೃತ್ತಿಯ ಯಶಸ್ಸಿಗೆ ರೈಲ್ವೆ ಭೂಮಿ ವಾಹನ ಪಾರ್ಕಿಂಗ್ ಜಾಗ ನೀಡುವುದು ಸೇರಿದಂತೆ ಸಂಪೂರ್ಣ ಸಹಕಾರ ನೀಡುವುದಾಗಿ ದಕ್ಷಿಣ ರೈಲ್ವೆ ಪಾಲಕ್ಕಾಡ್ ಡಿವಿಷನ್ ಮೇನೇಜರ್ ಅರುಣ್ ಕುಮಾರ್ ಚತುರ್ವೇದಿ ಸಂಘಟನಾ ಸಮಿತಿಯ ಪದಾಧಿಕಾರಿಗಳಿಗೆ ತಿಳಿಸಿದರು. ಫೆಸ್ಟ್ ಸಂಘಟನಾ ಸಮಿತಿಯ ಅಧ್ಯಕ್ಷ ಅಡ್ವ.ಸಿ.ಎಚ್.ಕುಂಜಂಬು ಎಮ್.ಎಲ್.ಎ ಡಿವಿಷನ್ ಮೇನೇಜರೊಂದಿಗೆ ನಡೆದ ಚರ್ಚೆಯಲ್ಲಿ ಖಾತರಿಪಡಿಸಲಾಯಿತು. ಬೇಕಲ್ ರೈಲ್ವೆ ಸ್ಟೇಷನ್ ಬಳಿಯಿರುವ ಖಾಲಿ ರೈಲ್ವೆ ಭೂಮಿಯನ್ನು ಸಂಪೂರ್ಣವಾಗಿ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ನೀಡಲಾಗುವುದು. ಫೆಸ್ಟ್‌ನ ದಿನಗಳಲ್ಲಿ ರೈಲುಗಳು ನಿಧಾನಗತಿಯಲ್ಲಿ ಸಾಗುತ್ತದೆ ಮತ್ತು ವಿಸಿಲ್ ವಾರ್ನಿಂಗ್ ನೀಡುತ್ತದೆ. ಕೆಲವು ರೈಲುಗಳಿಗೆ ಬೇಕಲದಲ್ಲಿ ಹೆಚ್ಚುವರಿ ನಿಲುಗಡೆಯನ್ನು ಪರಿಗಣಿಸಲಾಗುವುದು. ಇದಕ್ಕಾಗಿ ದಕ್ಷಿಣ ರೈಲ್ವೆ ಜನರಲ್ ಮೆನೇಜರ್ ಅವರನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳಲಾಗುವುದು. ಫೆಸ್ಟಿವಲ್ ವೀಕ್ಷಿಸಲು ಬರುವವರು ರೈಲ್ವೇ ಕಾಲುಸೇತುವೆ ಬಳಸಬಹುದಾಗಿದೆ. ಆದರೆ, ಅಕ್ರಮವಾಗಿ ರೈಲ್ವೆ ಹಳಿಗಳನ್ನು ದಾಟಬಾರದೆಂದು ಮತ್ತು ಈ ಕಾರ್ಯಗಳಿಗೆ ಅನುಮೋದಿತ ಮಾರ್ಗಗಳನ್ನು ಬಳಸಬೇಕೆಂದು ಪಾಲಕ್ಕಾಡ್ ರೈಲ್ವೆ ಡಿವಿಷನ್ ಮೇನೇಜರ್ ಅರುಣ್ ಕುಮಾರ್ ಚತುರ್ವೇದಿ ತಿಳಿಸಿದರು. ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿ.ಆರ್.ಡಿ.ಸಿ ಮ್ಯಾನೇಜಿಂಗ್ ಡೈರೆಕ್ಟರ್ ಶಿಜಿನ್ ಪರಂಬತ್ ಉಪಸ್ಥಿತರಿದ್ದರು.