ಕುಂಬಳೆ: ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ "ಸೃಜನೋತ್ಸವ 2023" ತಾಲೂಕು ಮಟ್ಟದ ಸ್ಪರ್ಧೆಗಳು ಡಿ.10 ರಂದು ಜಿ.ಎಚ್.ಎಸ್ ಅಂಗಡಿಮೊಗರು ಶಾಲೆಯಲ್ಲಿ ನಡೆಯಿತು.
ಕಾಸರಗೋಡು ಜಿಲ್ಲಾ ಲೈಬ್ರರಿ ಕೌನ್ಸಿಲ್ ಅಧ್ಯಕ್ಷ. ಕೆ. ವಿ. ಕುಂಞÂ ರಾಮನ್ ಸ್ಪರ್ಧಾ ಕಾರ್ಯಕ್ರಮದ ಉದ್ಘಾಟನೆ ನಿರ್ವಹಿಸಿದರು. ಪುತ್ತಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ಆಳ್ವ ್ಲ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಸದಸ್ಯೆ ಪ್ರೇಮ ಎಸ್. ರೈ ಶುಭಾಶಂಸನೆಗೈದರು. ಕೇರಳ ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಅಹ್ಮದ್ ಹುಸೈನ್ ಪಿ. ಕೆ., ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಜೊತೆಕಾರ್ಯದರ್ಶಿ ಶ್ರೀಕುಮಾರಿ ಕೆ., ಕೌನ್ಸಿಲ್ ಸದಸ್ಯರಾದ ಜಯಂತ ಎಂ., ದಾಸಪ್ಪ ಶೆಟ್ಟಿ, ಗಿರಿಜಾ ತಾರಾನಾಥ್, ಬಶೀರ್ ಕೊಟ್ಟುಡೆಲ್ ಮತ್ತು ವರ್ಕಾಡಿ ಗ್ರಾಮ ಪಂಚಾಯತಿ ಸಂಚಾಲಕ ವಿಜಯ ಕುಮಾರ್ ಪಾವಳ, ಮೀಂಜ ಗ್ರಾಮ ಪಂಚಾಯತಿ ಸಂಚಾಲಕ ಟಿ. ರಾಮಚಂದ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲಾ ಕೆ. ಸ್ವಾಗತಿಸಿ, ಕಾರ್ಯದರ್ಶಿ ಡಿ.ಕಮಲಾಕ್ಷ ವಂದಿಸಿದರು. ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಗ್ರಂಥಾಲಯಗಳಿಂದ ಆಯ್ಕೆಯಾದ ಮಕ್ಕಳು ಭಾಗವಹಿಸಿದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಎಸ್.ವಿ.ಎಸ್.ಒ.ಎಸ್.ಎ. ಗ್ರಂಥಾಲಯ ಮಿಯಪದವು ಪ್ರಥಮ, ಹಾಗೂ ಗೆಳೆಯರ ಬಳಗ ಗ್ರಂಥಾಲಯ, ಕುರುಡಪದವು ದ್ವಿತೀಯ ಸ್ಥಾನ ಪಡೆಯಿತು.