ಮಧೂರು: ಅಖಿಲ ಕೇರಳ ತಂತ್ರಿ ಸಮಾಜದ ಉತ್ತರ ವಲಯ ಘಟಕದ ವತಿಯಿಂದ ಯಜ್ಞಂ-2023 ಕಾರ್ಯಕ್ರಮ ಶುಕ್ರವಾರ ಪರಕ್ಕಿಲ ಶ್ರೀಮಹಾದೇವ ಶಾಸ್ತಾವಿನಾಯಕ ಸನ್ನಿಧಿಯಲ್ಲಿ ಆರಂಭಗೊಂಡಿತು.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಘಟಕದ ಉತ್ತರ ವಲಯಾಧ್ಯಕ್ಷ ಇರುವೈಲು ಪದ್ಮನಾಭ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಪ್ಲಾಕುಡಿ ಉಣ್ಣಿಕೃಷ್ಣನ್ ನಂಬೂದಿರಿ, ಅನುಗ್ರಹ ಭಾಷಣ ಮಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.ಕಕ್ಕಾಟ್ ಪದ್ಮನಾಭ ಪಟ್ಟೇರಿ ವಂದಿಸಿದರು.
ಬೆಳಿಗ್ಗೆ ಉಳಿಯದಲ್ಲಿ ಧನ್ವಂತರಿ ಮಂತ್ರಾರ್ಚನೆ ನಡೆಯಿತು. ನೀಲಮನ ರಂಜಿತ್ ನರಸಿಂಹನ್ ನಂಬೂದಿರಿಯವರ ಅಧ್ಯಕ್ಷತೆಯಲ್ಲಿ ಡಾ.ಟಿ.ಪಿ.ರಾಧಾಕೃಷ್ಣನ್ ನಂಬೂದಿರಿ, ಪಿ.ಉಣ್ಣಿಕೃಷ್ಣನ್ ನಂಬೂದಿರಿ ಧಾರ್ಮಿಕ-ತಾಂತ್ರಿಕ ವಿಧಿ-ವಿಧಾನಗಳ ಬಗ್ಗೆ ಮಾತನಾಡಿದರು. ಡಿ.31ರ ತನಕ ನಿರಂತರ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀಸತ್ಯನಾರಾಯಣ ಪೂಜೆ, ಶ್ರೀಸೂಕ್ತ ಹೋಮ ಆಯೋಜಿಸಲಾಗಿದೆ.