ನವದೆಹಲಿ: ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಭಾರತದ ತೆಂಗು ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ, 2024 ರ ಹಂಗಾಮಿಗೆ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು(MSP) ಹೆಚ್ಚಿಸಿದೆ.
ಕೇರಳ ಮತ್ತು ತಮಿಳುನಾಡು ಮಿಲ್ಲಿಂಗ್ ಕೊಬ್ಬರಿಯ ಪ್ರಮುಖ ಉತ್ಪಾದಕ ರಾಜ್ಯಗಳಾಗಿವೆ. ಆದರೆ ಉಂಡೆ ಕೊಬ್ಬರಿಯನ್ನು ಕರ್ನಾಟಕದಲ್ಲಿ ಪ್ರಧಾನವಾಗಿ ಉತ್ಪಾದಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ.
ಮಿಲ್ಲಿಂಗ್ ಕೊಬ್ಬರಿಗೆ MSP ಯನ್ನು ಶೇ. 2.7 ರಷ್ಟು ಹೆಚ್ಚಳ ಮಾಡಿದ್ದು, ಉಂಡೆ ಕೊಬ್ಬರಿಗೆ ಶೇ. 2 ರಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಮಿಲ್ಲಿಂಗ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 300 ರೂ. ಹಾಗೂ ಉಂಡೆ ಕೊಬ್ಬರಿಯ ‘ಎಂಎಸ್‌ಪಿ’ಯನ್ನು ಕ್ವಿಂಟಾಲ್‌ಗೆ 250 ರೂ. ಏರಿಕೆ ಮಾಡಲಾಗಿದೆ.ಮಿಲ್ಲಿಂಗ್ ಕೊಬ್ಬರಿಗೆ MSP ಯನ್ನು ಶೇ. 2.7 ರಷ್ಟು ಹೆಚ್ಚಳ ಮಾಡಿದ್ದು, ಉಂಡೆ ಕೊಬ್ಬರಿಗೆ ಶೇ. 2 ರಷ್ಟು ಹೆಚ್ಚಳ ಮಾಡಲಾಗಿದೆ. ಅಂದರೆ ಮಿಲ್ಲಿಂಗ್ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 300 ರೂ. ಹಾಗೂ ಉಂಡೆ ಕೊಬ್ಬರಿಯ ‘ಎಂಎಸ್‌ಪಿ’ಯನ್ನು ಕ್ವಿಂಟಾಲ್‌ಗೆ 250 ರೂ. ಏರಿಕೆ ಮಾಡಲಾಗಿದೆ.
ಇದರೊಂದಿಗೆ 2024ನೇ ಋುತುವಿಗೆ ಮಿಲ್ಲಿಂಗ್ ಕೊಬ್ಬರಿಯ ಕನಿಷ್ಠ ಬೆಲೆಯು ಕ್ವಿಂಟಾಲ್‌ಗೆ 11,160 ರೂ.ಗೆ ಹೆಚ್ಚಳಗೊಂಡಿದೆ. ಇದೇ ವೇಳೆ, ಉತ್ತಮ ಗುಣಮಟ್ಟದ ಉಂಡೆ ಕೊಬ್ಬರಿ ಬೆಲೆ 12,000 ರೂ.ಗೆ ಏರಿಕೆಯಾಗಿದೆ.
ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳು ಹಾಗೂ ಅಧಿಕ ತೆಂಗು ಬೆಳೆಯುವ ರಾಜ್ಯಗಳ ಅಭಿಪ್ರಾಯಗಳನ್ನು ಆಧರಿಸಿ ಈ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಸರ್ಕಾರ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ್ದಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿದ್ದಾರೆ. ಕೊಬ್ಬರಿ ಬೆಲೆ ಕುಸಿತದಿಂದ ರಾಜ್ಯದ ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ದೇವೇಗೌಡರು ಕಳೆದ ವಾರ ಪ್ರಧಾನಿ ಮೋದಿ ಭೇಟಿಯಾಗಿ ಮನವಿ ಮಾಡಿದ್ದರು.