HEALTH TIPS

ಕೃಷಿ ಆಧುನೀಕರಣಕ್ಕಾಗಿ ಕೆನ್ಯಾಗೆ ₹ 2,084 ಕೋಟಿ ಹಣಕಾಸು ನೆರವು: ಭಾರತ

                  ವದೆಹಲಿ: ಕೆನ್ಯಾ ದೇಶದಲ್ಲಿ ಕೃಷಿ ವಲಯದ ಆಧುನೀಕರಣ ಪ್ರಕ್ರಿಯೆ ಜಾರಿಗೊಳಿಸಲು ಒಟ್ಟು ₹ 2084.21 ಕೋಟಿ ಮೊತ್ತವನ್ನು ಸಾಲದ ರೂಪದಲ್ಲಿ ಒದಗಿಸಲಾಗುವುದು ಎಂದು ಭಾರತ ಸೋಮವಾರ ಪ್ರಕಟಿಸಿದೆ.

               ಕೆನ್ಯಾ ಅಧ್ಯಕ್ಷ ವಿಲಿಯಂ ಸಮೊಯಿ ರುಟೊ ಅವರ ಜೊತೆಗಿನ ವಿಸ್ತೃತ ಚರ್ಚೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಲ ನೆರವು ನೀಡುವ ತೀರ್ಮಾನ ಪ್ರಕಟಿಸಿದರು. ಮೂರು ದಿನದ ಪ್ರವಾಸಕ್ಕೆ ರುಟೊ ಇಲ್ಲಿಗೆ ಆಗಮಿಸಿದ್ದಾರೆ.

              ವಿದೇಶಾಂಗ ನೀತಿಯಡಿ ಭಾರತವು ಆಫ್ರಿಕಾಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ. ಕಳೆದೊಂದು ದಶಕದ ಅವಧಿಯಲ್ಲಿ ದ್ವಿಪಕ್ಷೀಯ ಒಪ್ಪಂದವನ್ನು ಸಮಗ್ರವಾಗಿ ವಿಸ್ತರಿಸಿದೆ ಎಂದು ಪ್ರಧಾನಿ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

                 ರುಟೊ ಅವರ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗುವ ಜತೆಗೆ ಆಫ್ರಿಕಾದಲ್ಲಿ ಭಾರತದ ಚಟುವಟಿಕೆಗೆ ಹೊಸ ಆಯಾಮ ನೀಡಲಿದೆ. ಆರ್ಥಿಕ ಸಹಕಾರ ಕುರಿತ ಪೂರ್ಣ ಲಾಭ ಪಡೆಯಲು ಉಭಯ ರಾಷ್ಟ್ರಗಳು ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಳಿವೆ ಎಂದು ಪ್ರಧಾನಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries