ತಿರುವನಂತಪುರ: ಕೆಎಸ್‍ಆರ್‍ಟಿಸಿಗೆ ರಾಜ್ಯ ಸರ್ಕಾರ ಇನ್ನೂ 20 ಕೋಟಿ ರೂಪಾಯಿ ಸಹಾಯಧನ ಮಂಜೂರು ಮಾಡಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಮಾಹಿತಿ ನೀಡಿದ್ದಾರೆ.
ಕಳೆದ ವಾರ ಪಿಂಚಣಿ ವಿತರಣೆಗೆ 71 ಕೋಟಿ ರೂ.ನೀಡಲಾಗಿತ್ತು. ಈ ತಿಂಗಳ ಆರಂಭದಲ್ಲಿ 30 ಕೋಟಿ ರೂ.ಕೂಡಾ ನೀಡಲಾಗಿತ್ತು.
ರಾಜ್ಯ ಸರ್ಕಾರ ಈ ತಿಂಗಳು ಪಾಲಿಕೆಗೆ 121 ಕೋಟಿ ರೂ.ಒಟ್ಟು ಮೊತ್ತು ನೀಡಿದಂತಾಗಿದೆ. ಈ ವರ್ಷದ ಬಜೆಟ್ ನಲ್ಲಿ 900 ಕೋಟಿ ರೂ.ಮೀಸಲಿಡಲಾಗಿತ್ತು.