ನಾವೀಗ 2023ರಲ್ಲಿ ಇದ್ದೀವಿ, ಇನ್ನೇನು ಕೆಲವೇ ದಿನಗಳಲ್ಲಿ 2024ಕ್ಕೆ ಕಾಲಿಡುತ್ತಿದ್ದೇವೆ, ವರ್ಷದಿಂದ ವರ್ಷಕ್ಕೆ ಟೆಕ್ನಾಲಾಜಿ ಬೆಳೆಯುತ್ತಲೇ ಇದೆ, ಈಗಾಗಲೇ ನಾವು ಚಂದ್ರ ಲೋಕ ತಲುಪಿದ್ದೇವೆ. ಕೆಲಸ ಕಾರ್ಯಗಳಿಗೆ, ನಾವು ದಿನನಿತ್ಯ ಮಾಡುವ ಕೆಲಸಗಳಿಗೆ ಟೆಕ್ನಾಲಾಜಿ ಬಂದಿದೆ.
ಮನೆಯಲ್ಲಿ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು, ರುಬ್ಬಲು, ಮನೆ ಒರೆಸಲು ಹೀಗೆ ಎಲ್ಲದರಲ್ಲೂ ಟೆಕ್ನಾಲಾಜಿ ನೋಡುತ್ತೇವೆ. ಅಷ್ಟೇ ಏಕೆ ಮಕ್ಕಳನ್ನು ಕೂಡಿ ಟೆಕ್ನಾಲಾಜಿ ಸಹಾಯದಿಂದ ಮಾಡುತ್ತಿರುವ ಕಾಲವಿದು. ಮೊದಲಿಗೆ ಭ್ರೂಣವನ್ನು ಲ್ಯಾಬ್‌ನಲ್ಲಿ ತಯಾರಿಸಿ, ಆ ಭ್ರೂಣವನ್ನು ಗರ್ಭಕ್ಕೆ ಸೇರಿಸುವ ಕಾಲವಿದು, ವರ್ಷದಿಂದ ವರ್ಷದಿಂದ ಟೆಕ್ನಾಲಾಜಿ ಬೆಳೆಯುತ್ತಲೇ ಇದೆ. ಒಂದು ಕಡೆ ಟೆಕ್ನಲಾಜಿ ಬೆಳೆಯುತ್ತಿದೆ , ಮತ್ತೊಂದೆಡೆ ಪ್ರಕೃತಿ ನಾಶವಾಗುತ್ತಿದೆ, ವಾಯು ಮಾಲಿನ್ಯ, ಜಲ ಮಾಲಿನ್ಯ ಎಲ್ಲವೂ ಹೆಚ್ಚಾಗಿದೆ. ಆದರೆ ಈ ಟೆಕ್ನಾಲಾಜಿ ಅಂಥ ಸಮಸ್ಯೆಗಳನ್ನು ಹೇಗೆ ಪರಿಹರಿಸುತ್ತದೆ, 2100ರಲ್ಲಿ ಟೆಕ್ನಾಲಾಜಿ ಹೇಗೆ ಇರಲಿದೆ ಎಂಬುವುದನ್ನು ಎಕ್ಸ್‌ಪರ್ಟ್‌ಗಳು ಹೇಳಿದ್ದು ಅದನ್ನು ನೋಡಲು ನಾವೆಲ್ಲಾ ಇರುವುದು ಡೌಟು, ಆದರೆ ಅದನ್ನು ಕೇಳಿದಾಗ ನಿಮಗೆ ಖಂಡಿತ ಆಶ್ಚರ್ಯವಾಗುವುದು ನೋಡಿ....
1900ರಲ್ಲಿ ಮೆಷಿನ್‌ಗಳ ಆವಿಷ್ಕಾರ ಆಯ್ತು, ಕೈಯಿಂದ ಬಟ್ಟೆಯನ್ನು ಹೊಲಿಯುತ್ತಿದ್ದ ಕಾಲದಲ್ಲಿ ಹೊಲಿಗೆ ಮೆಷಿನ್‌ಗಳು ಬಂದೆವು, ಪೆನ್ ಬದಲಿಗೆ ಟೈಪ್‌ರೈಟರ್ ಬಂತು, ಅಟೊಮೊಬೈಲ್, ಗ್ಯಾಡ್ಜೆಟ್ ಕ್ಷೇತ್ರದಲ್ಲಿ ತುಂಬಾನೇ ಬದಲಾವಣೆಗಳಾದೆ ವು. 2000ನೇ ಇಸವಿಯಲ್ಲಿ ಟೆಕ್ನಾಲಾಜಿ ಅಭಿವೃದ್ಧಿ ಆಯ್ತು, ಈಗ ನಾವೆಲ್ಲಾ ನಮ್ಮ ದಿನನಿತ್ಯ ಜೀವನದಲ್ಲಿ ಟೆಕ್ನಾಲಾಜಿಗೆ ತುಂಬಾನೇ ಅವಲಂಬಿಸಿದ್ದೇವೆ. 2100ರಲ್ಲಿ ಟೆಕ್ನಾಲಜಿ ಮನುಷ್ಯರ ಮೇಲೆ ಯಾವೆಲ್ಲಾ ರೀತಿಯ ಪ್ರಭಾವ ಬೀರಲಿದೆ ಎಂದು ಕೇಳಿದರೆ ನಿಮಗೆ ಖಂಡಿತ ಆಶ್ವರ್ಯವಾಗುತ್ತೆ....
ಪರಿಸರ:
ಈಗಾಗಲೇ ನಮ್ಮ ಪರಿಸರ ಎಷ್ಟು ಅಪಾಯದಲ್ಲಿದೆ ಎಂಬುವುದು ಗೊತ್ತಿದೆ, ಇನ್ನು ಕೆಲವು ವರ್ಷಗಳಲ್ಲಿ ಪರಿಸರ ಮಾಲಿನ್ಯ ಮತ್ತಷ್ಟು ಹೆಚ್ಚಾಗಲಿದೆ. ಸಮುದ್ರದ ಮಟ್ಟ 12 ಅಡಿ ಎತ್ತರ ತಲುಪಲಿದೆ, ಇದರಿಂದ ಮಾನವ ಕುಲಕ್ಕೆ ತುಂಬಾನೇ ಅಪಾಯ ಎದುರಾಗಲಿದೆ ಎಂದು ಹೇಳಲಾಗುವುದು. ಅಲ್ಲದೆ ವಾಯು ಮಾಲಿನ್ಯ ಕೂಡ ಹೆಚ್ಚಾಗುತ್ತಿದೆ, ಸೌರಶಕ್ತಿಯನ್ನು ಬಳಸುವುದರಿಂದ ಈ ಬಗೆಯ ಸಮಸ್ಯೆಯನ್ನು ತಗ್ಗಿಸಬಹುದು.
ಸೋಲಾರ್ ಮಾರ್ಕೆಟ್ ಹೆಚ್ಚಾಗಲಿದೆ
ಈಗಾಗಲೇ ಸೋಲಾರ್ ಶಕ್ತಿಯನ್ನ ಬಳಸುತ್ತಿದ್ದೇವೆ. ಸೂರ್ಯನ ಪ್ರತಿಯೊಂದು ಕಿರಣವನ್ನು ಸೌರಶಕ್ತಿಯನ್ನಾಗಿ ಬಳಸುವುದನ್ನು ಕಂಡು ಬರಲಿದೆ. ನಾಸಾದ ಟೆಕ್ನಾಲಾಜಿಸ್ಟ್ ಜೋನ್ ಮ್ಯಾನ್‌ಕಿನ್ಸ್ " ಸೋಲಾರ್ ಶಕ್ತಿ ಭವಿಷ್ಯದಲ್ಲಿ ಮಾರ್ಕೆಟ್ ಸೃಷ್ಟಿಸಲಿದೆ, ಇತರ ಶಕ್ತಿಗಿಂತ ಸೌರಶಕ್ತಿಯನ್ನು ಹೆಚ್ಚಾಗಿ ಬಳಸಲಾಗುವುದು.
ಆದರೆ ಸೂರ್ಯನ ಕಿರಣಗಳನ್ನು ಸಂಗ್ರಹಿಸುವುದು ಮೊದಲ ಸ್ಟೆಪ್ ಆಗಿರಬೇಕು, ಇದನ್ನು ಸ್ಟೋರ್ ಮಾಡಲು ಟೆಕ್ನಾಲಾಜಿ ಬರಲಿದೆ, ಇದರಿಂದ ಇಂದನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಗೆಹರಿಯಲಿದೆ. ಭವಿಷ್ಯದಲ್ಲಿ ಜನರು ಈಗೀನ ಸ್ಮಾರ್ಟ್‌ಫೋನ್ ಇದೆಯೆಲ್ಲಾ ಅಷ್ಟೇ ಗಾತ್ರದ ಸಾಧನದಲ್ಲಿ ಸೌರಶಕ್ತಿಯನ್ನು ಸಂಗ್ರಹಿಸಿಟ್ಟು ಬಳಸುವ ತಂತ್ರಜ್ಞಾನ ಬರಲಿದೆ.
ಆ ಚಿಕ್ಕ ವಸ್ತು ಬಳಸಿ ಕಾರು ಕೂಡ ಚಲಾಯಿಸಬಹುದು, ಆವಾಗ ವಾಯು ಮಾಲಿನ್ಯ ಸಂಪೂರ್ಭ ಕಡಿಮೆಯಾಗಲಿದೆ. ಈಗ ಕಾರ್ಬನ್ ಶಕ್ತಿಗಳನ್ನು ಬಳಸುತ್ತಿದ್ದರೆ 2100ರಲ್ಲಿ ಸೌರ ಶಕ್ತಿಯನನ್ನು ಬಳಸುತ್ತಿರುತ್ತೇವೆ.
ರೋಬೋ ಸೈನಿಕರನ್ನು ಕಾಣಬಹುದು
ಹಿಂದೆಯೆಲ್ಲಾ ಕತ್ತಿ, ಗುರಾಣಿ ಹಿಡಿದು ಹೋರಾಡುತ್ತಿದ್ದರು, ಈವಾಗ ಬಂದೂಕು, ಬಾಂಬ್ ಬಳಸಿ ಯುದ್ಧ ಮಾಡಲಾಗುತ್ತಿದೆ, ಮುಂದೆ ರೋಬೋ ಸೈನಿಕರು ಬರಲಿದ್ದಾರೆ. ಈಗಾಗಲೇ ನಾವು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಂದರೆ ಕೃತಕ ಬುದ್ಧಿವಂತಿಕೆಯನ್ನು ಹೆಚ್ಚಾಗಿ ಬಳಸುತ್ತೇವೆ. ಆದರೆ ಮುಂದಿನ 7 ದಶಕಗಳಲ್ಲಿ ಸಂಪೂರ್ಣ ಕೃತಕ ಬುದ್ಧಿವಂತಿಕೆ ಬಳಸಿ ಬಹುತೇಕ ಕಾರ್ಯಗಳನ್ನು ಮಾಡಲಾಗುವುದು. ಈಗ ಹೋಟೆಲ್‌ಗಳಲ್ಲಿ ರೋಬೋಗಳನ್ನು ನೋಡುತ್ತೇವೆ, ಭವಿಷ್ಯದಲ್ಲಿ ರೋಬೋ ಬಳಸಿ ಯುದ್ಧ ಮಾಡಲಾಗುವುದಂತೆ. ಆದರೆ ಇದರಿಂದ ಏನೂ ಆಪತ್ತು ಆಗಲ್ಲ ಎಂದರೆ ನಿಮ್ಮ ಊಹೆ ತಪ್ಪು, ಈ ರೋಬೋ ಬಂದರೆ ಯುದ್ಧ ಮತ್ತಷ್ಟು ಭಯಾನಕವಾಗಿರುತ್ತದೆ. ಏಕೆಂದರೆ ರೋಬೋಗಳಿಗೆ ಏನು ಸೂಚನೆ ನೀಡುತ್ತದೆ, ಅದನ್ನು ಅವುಗಳು ಮಾಡುತ್ತವೆ, ಆದ್ದರಿಂದ ರೋಬೋ ಯುದ್ಧ ತುಂಬಾನೇ ಭಯಾನಕ ಎಂದು ಹೇಳಬಹುದು.
ಭೂಮಿಯೊಳಗೆ ಸುರಂಗ ಕೊರೆದು ರಸ್ತೆ ಮಾರ್ಗಗಳನ್ನು ಬಳಸಲಾಗುವುದು, ಅಲ್ಲದೆ ಅತ್ಯಂತ ವೇಗವಾಗಿ ಬಳಸಬಹುದು
ಈಗಲೇ ಸುರಂಗ ಮಾರ್ಗವನ್ನು ಬಳಸಲಾಗುತ್ತಿದೆ, ಭವಿಷ್ಯದಲ್ಲಿ ಸುರಂಗ ಕೊರೆದು ಮಾರ್ಗವನ್ನು ನಿರ್ಮಿಸಲಾಗುವುದು, ಅಲ್ಲದೆ ಅತೀ ವೇಗವಾಗಿ ತಲುಪುವ ಮಾರ್ಗ ತಲುಪುವುದು. ಅಂಥ ಸೌಲಭ್ಯ ಬರಲಿದೆ. ಈಗಲೇ ಅದ್ಭುತ ಟೆಕ್ನಾಲಾಜಿ ಇದೆ, ಭವಿಷ್ಯದಲ್ಲಿ ಅದ್ಭುತ ಟೆಕ್ನಾಲಾಜಿ ಇದೆ.
ಭೂಮಿ ಮೇಲೆ ಇರುವ ಶೇ. 71ರಷ್ಟು ನೀರನ್ನು ಕುಡಿಯಲು ಸಾಧ್ಯವಿಲ್ಲ.
ಟ್ರಾನ್ಸ್‌ಪೋರ್ಟ್ ರಾಕೆಟ್ ಮೂಲಕ ಆಗಲಿದೆ
ಈವಾಗ ಟ್ರಾನ್ಸ್‌ಪೋರ್ಟ್ ಬಸ್, ಕಾರು, ಏರೋಪ್ಲೇನ್‌ಗಳ ಮೂಲಕ ಸಾಗುತ್ತಿದೆ, ಭವಿಷ್ಯದಲ್ಲಿ ಸಾಗಣೆಯು ರಾಕೆಟ್ ಮೂಲಕ ಸಾಗಲಿದೆ. ಎಲ್ಲಾ ಕಡೆ ಟೆಕ್ನಾಲಾಜಿ ಬಳಸಲಾಗುವುದು.
ಏರೋಪ್ಲೇನ್ ಓಡಿಸಲು ಪೈಲೆಟ್ ಬೇಕಾಗಿಲ್ಲ
ಈಗಾಲೇ ಡ್ರೈವರ್ ಇಲ್ಲದೆ ಚಲಿಸುವ ಕಾರುಗಳಿವೆ. ಅದರಂತೆ ಭವಿಷ್ಯದಲ್ಲಿ ಏರೋಪ್ಲೇನ್‌ಗಳಿಗೆ ಪೈಲೆಟ್ ಬೇಕಾಗಿಲ್ಲ. ಅಷ್ಟೊಂದು ಟೆಕ್ನಾಲಾಜಿ ಬೆಳೆಯಲಿದೆ. ಊಹಿಸಿದರೆ ಸಕತ್ ಥ್ರಿಲ್ ಅನಿಸುವುದು.
ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ಜೀವಿಸಲಿದ್ದಾರೆ ಈಗಾಲೇ ಜನರು ಬಾಹ್ಯಾಕಾಶಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ, ಚಂದ್ರನಲ್ಲಿ ಜೀವಿಸಬಹುದೇ, ಮಂಗಳದಲ್ಲಿ ಜೀವಿಸಬಹುದೇ? ಎಂದು ಅಧ್ಯಯನ ನಡೆಸಲಾಗುತ್ತಿದೆ. ಭವಿಷ್ಯದಲ್ಲಿ ಜನರು ಬಾಹ್ಯಾಕಾಶದಲ್ಲಿ ಜೀವಿಸಲಿದ್ದಾರೆ . ಇದನ್ನು ಊಹಿಸಿದರೆ ಸೂಪರ್ ಅನಿಸುತ್ತೆ ಅಲ್ವಾ?ಆದರೆ ಏನು ಮಾಡುವುದು ನಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳು ಈ ಸೌಲಭ್ಯ ಪಡೆಯಬಹುದು.