HEALTH TIPS

22ರಿಂದ ಬೇಕಲ್ ಬೀಚ್ ಫೆಸ್ಟ್ ಎರಡನೇ ಆವೃತ್ತಿ-ಸ್ವಾಗತಸಮಿತಿ ಅವಲೋಕನಾ ಸಭೆ

 

                

                 ಕಾಸರಗೋಡು: 'ಬೇಕಲ್ ಅಂತರಾಷ್ಟ್ರೀಯ ಕರವಳಿ ಉತ್ಸವ-2023'ಸ್ವಾಗತ ಸಮಿತಿ ಪರಿಶೀಲನಾ ಸಭೆ ಹಣಕಾಸು ಸಮಿತಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ವಿ.ಕುಞÂರಾಮಂತ್ ಅವರ ಅಧ್ಯಕ್ಷತೆಯಲ್ಲಿ ಪಳ್ಳಿಕೆರೆಯಲ್ಲಿ ಜರುಗಿತು.  ಉತ್ಸವದ 26 ಉಪಸಮಿತಿ ಅಧ್ಯಕ್ಷರು ಹಾಗೂ ಸಂಚಾಲಕರು ಇದುವರೆಗೆ ಅನುಷ್ಠಾನಗೊಳಿಸಿರುವ ಕಾರ್ಯಚಟುವಟಿಕೆಗಳು ಹಾಗೂ ಜಾರಿಗೊಳಿಸಬೇಕಾದ ಕಾರ್ಯಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು.  ಹಿಂದಿನ ವರ್ಷದಲ್ಲಿ ಲಕ್ಷಕ್ಕೂ ಮಿಕ್ಕಿ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಈ ವರ್ಷ ಜನಸಂಕ್ಯೆ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಜನದಟ್ಟಣೆ ಉಂಟಾಗದಂತೆ ಅಗತ್ಯ ಮುಂಜಾಗ್ರತೆ ವಹಿಸಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಅಗತ್ಯ ಕ್ರಮ ಕೈಗೊಂಡಿರುವ ಬಗ್ಗೆ ಸಮಿತಿ ಅಧ್ಯಕ್ಷ, ಶಾಸಕ ಸಿ. ಎಚ್.ಕುಂಜಂಬು ಮಾಹಿತಿ ನೀಡಿದರು.  ಕಡಲತೀರ ಪ್ರವೇಶಿಸಲು 25 ದ್ವಾರಗಳನ್ನು ಸಿದ್ಧಪಡಿಸಲಾಗುವುದು.ಹೊರಗೆ ಹೋಗಲು 5 ಮಾರ್ಗಗಳನ್ನು ಸಿದ್ಧಪಡಿಸಲಾಗಿದೆ. ಎರಡು ವೇದಿಕೆಗಲಲ್ಲಾಗಿ ನಿರಂತರ ಕಾರ್ಯಕ್ರಮ ನಡೆಯಲಿದೆ. 

                     ಅದೃಷ್ಟಶಾಲಿಗೆ ಕಾರು:  

               ಕುಟುಂಬಶ್ರೀ ಮತ್ತು ನೆರೆಕರೆ ಕೂಟ ಮೂಲಕ ಟಿಕೆಟ್ ಮಾರಾಟ ಆರಂಭಗೊಂಡಿದ್ದು,  ವಯಸ್ಕರಿಗೆ ನೂರು ರೂ. ಹಾಗೂ ಮಕ್ಕಳಿಗೆ 25ರೂ. ಪ್ರವೇಶಕ್ಕಾಗಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ವಯಸ್ಕರ ಎರಡೂವರೆ ಲಕ್ಷ ಹಾಗೂ ಮಕ್ಕಳ ಒಂದು ಲಕ್ಷ ಟಿಕೆಟ್‍ಗಳನ್ನು ಮಾರಾಟಕ್ಕೆ ಸಿದ್ಧಪಡಿಸಲಾಗಿದೆ. ಈಗಾಗಲೇ ಹತ್ತು ಸಾವಿರ ಟಿಕೆಟ್‍ಗಳು ಮಾರಾಟವಾಗಿವೆ. ಸ್ಥಳದಲ್ಲಿ 20 ಕೌಂಟರ್‍ಗಳು ಟಿಕೆಟ್ ಮಾರಾಟಕ್ಕೆ ವ್ಯವಸ್ಥೆಮಾಡಲಾಗಿದೆ. ಕೌಂಟರ್‍ಗಳ ಮೂಲಕ ಪ್ರತಿದಿನ 25,000 ಮತ್ತು 50,000 ಟಿಕೆಟ್‍ಗಳನ್ನು ಮಾರಾಟಕ್ಕೆ ಸಿದ್ಧಪಡಿಸಲಾಗುತ್ತದೆ. ಕುಟುಂಬಶ್ರೀ ಮೂಲಕ ಮಾರಾಟವಾಗುವ ಟಿಕೆಟ್‍ಗಳಿಗೆ ಡ್ರಾ ಮೂಲಕ ಒಬ್ಬ ಅದೃಷ್ಟಶಾಲಿ ವಿಜೇತಗೆ ಕಾರನ್ನು ಬಹುಮಾನವಾಗಿ ನೀಡಲಾಗುವುದು. ಡಿ. 31 ರಂದು ಸಮಾರೋಪ ಸಮಾರಂಭದಲ್ಲಿ ಅದೃಷ್ಟಚೀಟಿ ಡ್ರಾ ಎತ್ತಲಾಗುವುದು.

             ಬೀಚ್ ಉತ್ಸವದ ಅಂಗವಾಗಿ ಬರುವ ಜನಸಂದಣಿಗಾಗಿ 6ಎಕರೆ ಜಾಗದಲ್ಲಿ ಪಾಕಿರ್ಂಗ್ ವ್ಯವಸ್ಥೆ ಸಿದ್ಧವಾಗಿದೆ. ಖಾಸಗಿ ಪ್ರದೇಶಗಳಲ್ಲಿ ಕಾರಿಗೆ 50, ಬೈಕ್‍ಗೆ 20, ಬಸ್‍ಗೆ 100 ರೂ.ಪರ್ಕಿಂಗ್ ದರ ನಿಗರಿಪಡಿಸಲಾಗಿದೆ.

               ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಕಾಞಂಗಾಡ್ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎಂ.ಮಣಿಕಂಠನ್, ಪಳ್ಳಿಕ್ಕರ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ, ಪಳ್ಳಿಕ್ಕರ ಪಂಚಾಯಿತಿ ಉಪಾಧ್ಯಕ್ಷೆ ನಾಸ್ನೀನ್ ವಹಾಬ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries