ಕಾಸರಗೋಡು: ಅಂತಾರಾಷ್ಟ್ರೀಯ ಬೇಕಲ್ ಫೆಸ್ಟ್ ಡಿ. 22ರಂದು ಆರಂಭಗೊಳ್ಳಳಿದ್ದು, ಸಿದ್ಧತೆ ಪೂರ್ಣಗೊಂಡಿರುವುದಾಗಿ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್ ಕುಞಂಬು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಹಿರಿಯರಿಗೆ ನೂರು ರೂ. ಹಾಗೂ ಮಕ್ಕಳಿಗೆ 25ರೂ. ಪ್ರವೇಶ ಶುಲ್ಕ ವಿಧಿಸಲಾಗಿದ್ದು, ಕುಟುಂಬಶ್ರೀ ಮೂಲಕ ಟಿಕೆಟ್ ಮಾರಾಟಕ್ಕೆ ಬೇಕಲ ಫೆಸ್ಟ್ ವಠಾರದ 30ಕೇಂದ್ರಗಳಲ್ಲಿ ಕೌಂಟರ್ ತೆರೆಯಲಾಗುವುದು. ಉತ್ಸವದಲ್ಲಿ ಪ್ರಧಾನ ಎರಡು ವಏದಿಕೆಗಳಲ್ಲಿ ನಿರಂತರ ಕಲಾ ಕಾರ್ಯಕ್ರಮ ನಡೆಯಲಿರುವುದು. ಇದೇ ಮೊದಲಬಾರಿಗೆ ಪ್ಯಾರಾಚೂಟ್ ಹಾರಾಟಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ. ವಾಟರ್ ಸ್ಪೋಟ್ರ್ಸ್ ಅಂಗವಾಗಿ ಜೆಟ್‍ಸ್ಕೈ, ಸಪೀಡ್ ಬೋಟ್, ಬೀಚ್ ಬೈಕ್, ಒಂಟೆ, ಕುದುರೆ ಸವಾರಿಯ ಮೋಜು, ಜೈಂಟ್ ವಈಲ್, ಕಂಪ್ಯೂಟರ್ ಗೇಮ್ಸ್, ಕಾರ್ ರೇಸಿಂಗ್, ಪ್ರತಿದಿನ ಡಿಜೆ ಪಾರ್ಟಿ, ಮ್ಯೂಸಿಕಲ್ ನೈಟ್ ಸೇರಿದಂತೆ ಕಲಾಪ್ರಕಾರಗಳು ನಡೆಯಲಿರುವುದು. 22ರಂದು ಸಂಜೆ 5.30ಕ್ಕೆ ವಿಧಾನಸಭಾ ಸ್ಪೀಕರ್ ಎ.ಎನ್ ಶಂಸೀರ್ ಬೇಕಲ್ ಫೆಸ್ಟ್ ಉದ್ಘಾಟಿಸುವರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಜಿಲ್ಲೆಯ ಶಾಸಕರು, ಜಿ.ಪಂ ಅಧ್ಯಕ್ಷೆ, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಸುದ್ದಿಗೋಷ್ಠೀಯಲ್ಲಿ ಮುಖ್ಯ ಸಂಯೋಜಕ, ಬಿಆರ್‍ಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಶಿಜಿನ್, ಕುಟುಂಬಶ್ರೀ ಜಿಲ್ಲಾಧ್ಯಕ್ಷ ಟಿ.ಟಿ.ಸುರೇಂದ್ರನ್, ಮಧು ಮುದಿಯಕ್ಕಲ್, ಎಂ.ಎ.ಲತೀಫ್ ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಅವಲೋಕನ:
ಬೇಕಲ್ ಫೆಸ್ಟ್ ಅಂಗವಾ ಕೈಗೊಂಡಿರುವ ಸಿದ್ಧತಾ ಕಾರ್ಯಗಳ ಬಗ್ಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಬುಧವಾರ ಸ್ಥಳ ಪರಿಶೀಲನೆ ನಡೆಸಿದರು. ಕಾರ್ಯಕ್ರಮ ನಡೆಯಲಿರುವ ವೇದಿಕೆ ಹಾಗೂ ಆಸುಪಾಸು ಕೈಗೊಳ್ಳಲಾಗಿರುವ ಭದ್ರತಾ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಮೂಲಸೌಕರ್ಯಗಳ ಬಗ್ಗೆ ಅವಲೋಕನ ನಡೆಸಿದರು.