HEALTH TIPS

ಗಾಜಾ ಮೇಲೆ ಇಸ್ರೇಲ್‌ ದಾಳಿ ತೀವ್ರ, 240 ಮಂದಿ ಸಾವು

                   ಖಾನ್‌ ಯೂನಿಸ್‌: ಹಮಾಸ್‌ ಬಂಡುಕೋರರನ್ನು ಗುರಿಯಾಗಿಸಿಕೊಂಡು ಗಾಜಾ ಮೇಲೆ ಇಸ್ರೇಲ್‌ ಶನಿವಾರವೂ ದಾಳಿ ನಡೆಸಿದ್ದು ಬಾಂಬ್‌, ರಾಕೆಟ್ ದಾಳಿಯಿಂದಾಗಿ ಇಡೀ ಗಾಜಾ ನಗರವೇ ದಟ್ಟ ಹೊಗೆಯಲ್ಲಿ ಮುಳುಗಿದೆ. 'ಶುಕ್ರವಾರ ಬೆಳಿಗ್ಗೆಯಿಂದ ಈವರೆಗೆ ಅಂದಾಜು 240 ಮಂದಿ ಮೃತಪಟ್ಟಿದ್ದಾರೆ' ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಹೇಳಿದೆ.

                'ಕದನ ವಿರಾಮ ಅಂತ್ಯಗೊಂಡ ನಂತರ 400ಕ್ಕೂ ಹೆಚ್ಚು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಭೂ, ವಾಯು, ನೌಕಾ ಪಡೆಗಳೂ ಇದರಲ್ಲಿ ಭಾಗಿಯಾಗಿದ್ದವು. ಯುದ್ಧ ವಿಮಾನಗಳು ಖಾನ್‌ ಯೂನಿಸ್‌ ನಗರದಲ್ಲಿ 50ಕ್ಕೂ ಹೆಚ್ಚು ನೆಲೆಗಳನ್ನು ನಾಶಪಡಿಸಿವೆ' ಎಂದು ಇಸ್ರೇಲ್‌ ಸೇನೆ ತಿಳಿಸಿದೆ.

                ಇಸ್ರೇಲ್‌ ದಾಳಿ ನಡೆಸುತ್ತಿದ್ದಂತೆಯೇ ಹಮಾಸ್‌ ತನ್ನ ಸೇನಾ ಪಡೆಗಳಿಗೆ 'ಯುದ್ಧ ಆರಂಭಿಸಿ' ಮತ್ತು 'ಗಾಜಾಪಟ್ಟಿ ಕಾಪಾಡಿ' ಎಂಬ ಸಂದೇಶ ರವಾನಿಸಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಮೂಲಗಳು ಮಾಧ್ಯಮಗಳಿವೆ ತಿಳಿಸಿವೆ.

              ಉಭಯ ಪಡೆಗಳ ಮಧ್ಯೆ ಸಂಘರ್ಷ ಆರಂಭವಾಗಿರುವುದನ್ನು ಅಂತರರಾಷ್ಟ್ರೀಯ ಸಂಘಟನೆಗಳು ಖಂಡಿಸಿವೆ. ಗಾಜಾ ಮೇಲೆ ಇಸ್ರೇಲ್‌ ದಾಳಿ ತೀವ್ರಗೊಳಿಸಿರುವುದರಿಂದ ನಾಗರಿಕರ ಸಾವು-ನೋವು ಹೆಚ್ಚಬಹುದೆಂದು ಅವು ಕಳವಳ ವ್ಯಕ್ತಪಡಿಸಿವೆ.

                 ಇಸ್ರೇಲ್‌-ಹಮಾಸ್ ಬಂಡುಕೋರರ ಮಧ್ಯೆ ನ.24ರಿಂದ ವಾರಕ್ಕೂ ಹೆಚ್ಚು ದಿನ ಅಸ್ತಿತ್ವದಲ್ಲಿದ್ದ ಕದನ ವಿರಾಮದ ಸಂದರ್ಭದಲ್ಲಿ ಹಮಾಸ್‌ ಮತ್ತು ಇತರ ಭಯೋತ್ಪಾದಕರು 80ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಇಸ್ರೇಲ್‌ 240 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿದೆ.

             ಈ ಮಧ್ಯೆ ಕದನ ವಿರಾಮ ಒಪ್ಪಂದ ನಿಯಮ ಉಲ್ಲಂಘಿಸಲಾಗಿದೆ ಎಂದು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ, ಶುಕ್ರವಾರದಿಂದ ಯುದ್ಧ ಆರಂಭಿಸಿವೆ.

              ಅ.7ರಂದು ಇಸ್ರೇಲ್‌ ಮೇಲೆ ಹಠಾತ್‌ ದಾಳಿ ನಡೆಸಿದ್ದ ಹಮಾಸ್‌ ಬಂಡುಕೋರರು 1,200 ಮಂದಿಯನ್ನು ಹತ್ಯೆಗೈದು, ಸುಮಾರು 240 ಜನರನ್ನು ಅಪಹರಣ ಮಾಡಿದ್ದರು ಎಂದು ಇಸ್ರೇಲ್‌ ಅಧಿಕಾರಿಗಳು ತಿಳಿಸಿದ್ದಾರೆ.

            'ಇಸ್ರೇಲ್‌ ವಾಯು, ಭೂ ಮಾರ್ಗವಾಗಿ ನಡೆಸಿದ ಪ್ರತಿದಾಳಿಯಲ್ಲಿ ಈವರೆಗೆ 15,200 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಶೇ 70ರಷ್ಟು ಮಂದಿ ಮಹಿಳೆಯರು ಮತ್ತು ಮಕ್ಕಳು. ಹಾಗೆಯೇ, 40,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ' ಎಂದು ಗಾಜಾದಲ್ಲಿನ ಹಮಾಸ್‌ ಆರೋಗ್ಯ ಸಚಿವಾಲಯ ತಿಳಿಸಿದೆ.

              ಯುದ್ಧದ ಕೇಂದ್ರವಾಗಿದೆ ಖಾನ್‌ ಯೂನಿಸ್‌: ಖಾನ್‌ ಯೂನಿಸ್ ನಗರದ ಮೇಲೆ ಇಸ್ರೇಲ್‌ ತೀವ್ರ ದಾಳಿ ಮುಂದುವರೆಸಿದೆ. ಇದಕ್ಕೂ ಮುನ್ನ ನಗರವನ್ನು ತೊರೆಯುವಂತೆ ಜನರಿಗೆ ಎಚ್ಚರಿಕೆ ನೀಡಿ ಕರಪತ್ರಗಳನ್ನೂ ಎಸೆದಿತ್ತು.


          'ಆದರೆ ಶುಕ್ರವಾರ ರಾತ್ರಿವರೆಗೂ ಹೆಚ್ಚಿನ ಸಂಖ್ಯೆಯ ಜನರು ನಗರವನ್ನು ತೊರೆದ ಬಗ್ಗೆ ವರದಿಯಾಗಿಲ್ಲ' ಎಂದು ವಿಶ್ವಸಂಸ್ಥೆ ಹೇಳಿದೆ.

            'ಎಲ್ಲಿಯೂ ಜಾಗವಿಲ್ಲ. ಅವರು ಉತ್ತರದಿಂದ ನಮ್ಮನ್ನು ಹೊರದಬ್ಬಿದರು, ಈಗ ದಕ್ಷಿಣದಿಂದಲೂ ಹೊರಹಾಕುತ್ತಿದ್ದಾರೆ' ಎಂದು ಇಮಾದ್‌ ಹಜಾರ್ ಎಂಬುವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

              ಇಮಾದ್‌ ಹಜಾರ್ ಅವರು ಉತ್ತರದ ಬೈಟ್‌ ಲಹಿಯಾ ನಗರದಿಂದ ಪತ್ನಿ ಮತ್ತು ಮೂವರು ಮಕ್ಕಳೊಟ್ಟಿಗೆ ಖಾನ್‌ ಯೂನಿಸ್‌ ನಗರಕ್ಕೆ ಕಳೆದ ತಿಂಗಳಷ್ಟೇ ಬಂದು ನೆಲೆಸಿದ್ದರು.

                ಗಾಜಾದಲ್ಲಿ ಅಂದಾಜು 17 ಲಕ್ಷ ಜನರಿದ್ದರು. ಯುದ್ಧ ಆರಂಭವಾದ ಕೆಲ ವಾರಗಳ ನಂತರ ಶೇ 80ರಷ್ಟು ಜನರು ಸ್ಥಳಾಂತರಗೊಂಡಿದ್ದರು. ಆದರೆ ಇಲ್ಲೇ ಉಳಿದಿರುವ ಜನರು ಆಹಾರ, ನೀರು ಇತರ ಅಗತ್ಯ ವಸ್ತುಗಳ ಅಭಾವ ಎದುರಿಸುತ್ತಿದ್ದಾರೆ, ಅವರ ಮನೆಗಳನ್ನು ನಾಶ ಮಾಡಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ನಿಂತಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries