HEALTH TIPS

246 ಮೊಳೆಗಳು, 5000 ಮೀಟರ್ ನೂಲು! ಮೂರು ಅಡಿ ಉದ್ದ ಮತ್ತು ಅಗಲದ ಕ್ಯಾನ್ವಾಸ್ ಮೇಲೆ ಅಯ್ಯಪ್ಪಸ್ವಾಮಿಯ ಭಾವಚಿತ್ರ: ತಂತಿ ಕಲೆಯಲ್ಲಿ ಮೂಡಿದ ಅಯ್ಯಪ್ಪ

                ಪತ್ತನಂತಿಟ್ಟ: 246 ಮೊಳೆಗಳು, 5000 ಮೀಟರ್ ಕಪ್ಪು ದಾರ.. ಮೂರು ಅಡಿ ಉದ್ದ ಮತ್ತು ಅಗಲದ ಕ್ಯಾನ್ವಾಸ್‍ನಲ್ಲಿ ಅಯ್ಯಪ್ಪಸ್ವಾಮಿಯ ಚಿತ್ರವೊಂದು ಗಮನ ಸೆಳೆಯುತ್ತಿದೆ. 

               ಕೋಝಿಕ್ಕೋಡ್ ನಿವಾಸಿ ವಿಜಿಲಾಲ್ ಮವ ಅವರು ತಮ್ಮ ಕೈಯಾರೆ ಅಯ್ಯಪ್ಪಸ್ವಾಮಿಯ ದಾರ ಅಥವಾ ಸ್ಪ್ರಿಂಗ್ ಕಲೆಯೊಂದಿಗೆ ರಚಿಸಿದ ಈ ಕಲಾಕೃತಿಯೊಂದಿಗೆ ಶಬರಿಮಲೆಗೆ ಬರಲಿದ್ದಾರೆ. ಪಾಲಿಶ್ ಮಾಡುವ ಕೆಲಸ ಬಾಕಿಇದೆ. ಬಳಿಕ ಹರಿಹರಸುತನ ಈ ತಂತಿ ಕಲೆಯನ್ನು ಎದೆಗವಚಿ ಹಿಡಿದು  18 ಮೆಟ್ಟಿಲು ಹತ್ತಿ ಅಯ್ಯಪ್ಪ ಸನ್ನಿಧಿ ತಲುಪುವ ಗುರಿ ಇವರದು.

                ಸ್ಟ್ರಿಂಗ್ ಆಟ್ರ್ಸ್ ಪ್ಲೈವುಡ್‍ನಲ್ಲಿ ಚಾರ್ಟ್ ಪೇಪರ್ ಅನ್ನು ಅಂಟಿಸಿ, ಅದನ್ನು ಮೊಳೆ ಮೂಲಕ ಜೋಡಿಸಿ ಈ ಕಲಾಕೃತಿ ರಚಿಸಲಾಗಿದೆ. ಪೂರ್ವ ಯೋಜನೆ ಇಲ್ಲದೆ ಮಾನಸಿಕ ಲೆಕ್ಕಾಚಾರದ ಮೂಲಕ ತಂತಿದಾರದಿಂದ ತಯಾರಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ನೋಡಿದ ವೀಡಿಯೊ ವಿಜಿಲಾಲ್ ಅವರನ್ನು ಸ್ಟ್ರಿಂಗ್ ಆರ್ಟ್ ಜಗತ್ತಿಗೆ ಆಕರ್ಷಿಸಿತು. ನಂತರ ಗೂಗಲ್ ಮತ್ತು ಯೂಟ್ಯೂಬ್ ಸಹಾಯದಿಂದ ಹೆಚ್ಚಿನ ವಿಷಯಗಳನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು ಎಂದು ವಿಜಿಲಾಲ್ ಹೇಳುತ್ತಾರೆ. ಹೆಚ್ಚು ಜನಪ್ರಿಯವಾಗದ ಸ್ಟ್ರಿಂಗ್ ಆರ್ಟ್ ಜಗತ್ತಿಗೆ ಕಾಲಿಟ್ಟರೂ ಅದು ಸರಿಯಾಗಿ ಗುರುತಿಸಲ್ಪಡುತ್ತಿಲ್ಲ ಎಂಬ ಭಾವನೆಯಿಂದ ಆಗಾಗ ಕಾಡುತ್ತಿದೆ  ಎನ್ನುತ್ತಾರೆ ವಿಜಿಲಾಲ್.

                ಮೊದಲ ಬಾರಿಗೆ, ವಧು ಮತ್ತು ವರನ ಚಿತ್ರವನ್ನು ಸ್ನೇಹಿತರ ಮದುವೆಗೆ ಉಡುಗೊರೆಯಾಗಿ ಮಾಡಲು ಯತ್ನಿಸಿದರು. ಆದರೆ ಪ್ರಯತ್ನ ಅರ್ಧಕ್ಕೆ ಕೈಬಿಡಲಾಯಿತು. 1,000 ಮೀಟರ್ ದಾರದ ಮೂಲಕ ತನ್ನ ಮೊಬೈಲ್ ಕ್ಯಾಮೆರಾ ಸೆರೆಹಿಡಿದ ಚಿತ್ರದಲ್ಲಿ ತಾನು ಸಿದ್ಧಪಡಿಸಿದ ಚಿತ್ರ ಗೋಚರಿಸುವುದನ್ನು ಗಮನಿಸಿದ ವಿಜಿಲಾಲ್ ಚಿತ್ರವನ್ನು ಪೂರ್ಣಗೊಳಿಸಲು ಗಂಟೆಗಳ ಕಾಲ ತೆಗೆದುಕೊಂಡರು.

             ನಂತರ 5,000 ಮೀಟರ್ ದಾರ ಮತ್ತು 286 ಮೊಳೆಗಳನ್ನು ಬಳಸಿ ನಾಲ್ಕು ಅಡಿ ಕ್ಯಾನ್ವಾಸ್‍ನಲ್ಲಿ ಮುತ್ತಪ್ಪನ ಚಿತ್ರವನ್ನು ಪರಶ್ಶಿನಿಕಡವ್ ನಲ್ಲಿ ರಚಿಸಿದರು. ಇದರೊಂದಿಗೆ ಕೇರಳದಲ್ಲಿ ಅμÁ್ಟಗಿ ಜನಪ್ರಿಯವಾಗದ ಸ್ಟ್ರಿಂಗ್ ಆರ್ಟ್ ಜನಮನ ಸೆಳೆಯತೊಡಗಿತು. ಇದಾದ ಬಳಿಕ ಅಯ್ಯಪ್ಪಸ್ವಾಮಿಯ ದಾರ ಕಲೆಗೆ ಇದೀಗ ಕಾಲಿರಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries