ತಿರುವನಂತಪುರಂ: ರಾಜ್ಯಪಾಲರ ಮೇಲೆ ಎಸ್.ಎಫ್.ಐ. ತಂಡ ನಡೆಸಿದ ದಾಳಿ ಯೋಜಿತ ಎಂಬುದಕ್ಕೆ ಗುಪ್ತಚರ ವರದಿಯೊಂದು ಸಾಕ್ಷಿಯಾಗಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯ ಗುಪ್ತಚರ ಇಲಾಖೆ ಮೂರು ಎಚ್ಚರಿಕೆಗಳನ್ನು ನೀಡಿತ್ತು. ರಾಜ್ಯಪಾಲರ ವಿರುದ್ಧ ಎಸ್‍ಎಫ್‍ಐ ಮತ್ತೆ ಕಪ್ಪು ಬಾವುಟ ಪ್ರದರ್ಶಿಸಿ ದಾಳಿ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರೂ ಪೋಲೀಸರು ಕಣ್ಮುಚ್ಚಿ ವರ್ತಿಸಿರುವುದು ಸ್ಪಷ್ಟವಾಗಿದೆ.
ಪ್ರತಿಭಟನೆಗಳನ್ನು ಆಯೋಜಿಸುವ ಸಾಧ್ಯತೆಯಿರುವ ಸ್ಥಳಗಳನ್ನು ಸಹ ವರದಿಯು ಸೂಚಿಸಿತ್ತು. ಹೆಚ್ಚುವರಿ ಭದ್ರತೆ ಒದಗಿಸಬೇಕು ಹಾಗೂ ಗುಪ್ತಚರ ವರದಿಯನ್ನು ಗೌಪ್ಯವಾಗಿಡಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿಸ್ತೃತ ವರದಿ ನೀಡಿದರೂ ಪೋಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಪೋಲೀಸ್ ಅಸೋಸಿಯೇಷÀನ್ ಮುಖಂಡ ನಿನ್ನೆ ಬೆಳಿಗ್ಗೆ ಎಸ್‍ಎಫ್‍ಐಗೆ ರಾಜ್ಯಪಾಲರ ಪ್ರವಾಸ ಟೈಮ್ ಟೇಬಲ ಸೋರಿಕೆ ಮಾಡಿದ್ದು, ಅದನ್ನು ಗೌಪ್ಯವಾಗಿಡಲು ನಗರ ಪೋಲೀಸ್ ಕಮಿಷನರ್ ಸೂಚನೆ ನೀಡಿದ್ದರು ಎಂದು ಗುಪ್ತಚರರು ಪತ್ತೆ ಮಾಡಿದ್ದಾರೆ.
ಮೊದಲ ಗುಪ್ತಚರ ವರದಿ ಭಾನುವಾರ ಸಂಜೆ ನೀಡಲಾಗಿತ್ತು. ರಾಜ್ಯಪಾಲರು ಸಾಮಾನ್ಯ ಮಾರ್ಗದ ಹೊರತಾಗಿ ವಿಮಾನ ನಿಲ್ದಾಣಕ್ಕೆ ತೆರಳಲು ಪರ್ಯಾಯ ಮಾರ್ಗವನ್ನು ನಿಗದಿಪಡಿಸಬೇಕು ಎಂದೂ ಸೂಚಿಸಲಾಗಿತ್ತು. ಇದನ್ನು ಗೌಪ್ಯವಾಗಿಡುವಂತೆಯೂ ಆಯುಕ್ತರು ಸೂಚನೆ ನೀಡಿದ್ದರು. ಆದರೆ ನಿನ್ನೆ ಇದೆಲ್ಲವನ್ನೂ ಗಾಳಿಗೆ ತೂರಲಾಗಿತ್ತು. ನಿನ್ನೆ ಬೆಳಗ್ಗೆ ಎರಡನೇ ವರದಿ ಬಂದಿದ್ದು, ಪ್ರತಿಭಟನೆ ತೀವ್ರಗೊಳ್ಳುವ ಸುಳಿವು ನೀಡಿತ್ತು. ನಿನ್ನೆ ಮಧ್ಯಾಹ್ನ ನೀಡಲಾದ ಮೂರನೇ ವರದಿಯು ಪ್ರತಿಭಟನೆಗಳ ಸಂಭವನೀಯ ಸ್ಥಳಗಳನ್ನು ನಿರ್ದಿಷ್ಟಪಡಿಸಿತ್ತು.