ತಿರುವನಂತಪುರಂ: ಸಪ್ಲೈಕೋ ಮೂಲಕ ಮಾರಾಟ ಮಾಡುವ ಸಬ್ಸಿಡಿ ಸರಕುಗಳ ಬೆಲೆಯನ್ನು ಸರ್ಕಾರ ಹೆಚ್ಚಿಸಲಿದೆ. ಶೇ.25 ರಷ್ಟು ಬೆಲೆಯನ್ನು ಹೆಚ್ಚಿಸಲಾಗಿದೆ.
ಬೆಲೆ ಪರಿಷ್ಕರಣೆಗಾಗಿ ಸರ್ಕಾರ ನೇಮಿಸಿದ ತಜ್ಞರ ಸಮಿತಿಯು ಇದನ್ನು ಒಪ್ಪಿಕೊಂಡಿದೆ. ಪ್ರಸ್ತುತ 13 ಉತ್ಪನ್ನಗಳಿಗೆ ಸಬ್ಸಿಡಿ ನೀಡಲಾಗಿದೆ.
ಕಳೆದ ತಿಂಗಳು ನಡೆದ ಎಡಪಕ್ಷಗಳ ಸಭೆ ಬೆಲೆ ಏರಿಕೆಗೆ ಅನುಮತಿ ನೀಡಿತ್ತು. ಸಬ್ಸಿಡಿ ಉತ್ಪನ್ನಗಳ ಸಂಖ್ಯೆಯನ್ನು 16ಕ್ಕೆ ಹೆಚ್ಚಿಸುವ ಸಾಧ್ಯತೆಯನ್ನು ಸÀರ್ಕಾರ ಕೇಳಿದ್ದರೂ ಸಮಿತಿಯು ಅನುಕೂಲಕರ ನಿಲುವು ತಳೆದಿಲ್ಲ. ಸಪ್ಲೈಕೋ ಉಳಿವಿಗಾಗಿ ಸರ್ಕಾರ ಹೆಚ್ಚಿನ ಬಂಡವಾಳ ಹೂಡಿ ಸೂಪರ್ ಬಜಾರ್ ಗಳ ಜಾಲವನ್ನು ಸ್ಥಾಪಿಸಬೇಕು ಎಂಬುದು ಸಮಿತಿ ಮುಂದಿಟ್ಟಿರುವ ಇನ್ನೊಂದು ಶಿಫಾರಸು. ಯೋಜನಾ ಮಂಡಳಿಯ ಡಾ ರವಿರಾಮನ್ ಅಧ್ಯಕ್ಷತೆಯ ತಜ್ಞರ ಸಮಿತಿಯು ಈ ವಾರ ವರದಿ ಸಲ್ಲಿಸಲಿದೆ.